More

    ಸಿದ್ಧಾರೂಢ ಶ್ರೀಗಳ ಮೂರ್ತಿ ಅಂದುಕೊಂಡು ಹತ್ತಿರ ಹೋದವರಿಗೆ ಕಾದಿತ್ತು ಅಚ್ಚರಿ! ವಿಡಿಯೋ ವೈರಲ್​

    ಧಾರವಾಡ: ನಗರದ ಭಾರತ ಪ್ರೌಢಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆಯಿಂದ 2023- 24ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಶುಕ್ರವಾರ (ಡಿ.22) ಏರ್ಪಡಿಸಲಾಗಿತ್ತು.

    ಛದ್ಮವೇಷ, ಆಶುಭಾಷಣ, ಕಂಠಪಾಠ, ಅಭಿನಯ ಗೀತೆ, ಕವ್ವಾಲಿ, ಜಾನಪದ ನೃತ್ಯ, ಅಭಿನಯ, ಮಾಡೆಲಿಂಗ್, ರಂಗೋಲಿ, ಹಾಡುಗಾರಿಕೆ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

    ಛದ್ಮವೇಷದಲ್ಲಿ ಸಿದ್ಧಾರೂಢರ ಛದ್ಮವೇಷ ಸ್ಪರ್ಧೆ ಗಮನ ಸೆಳೆಯಿತು. ಹುಬ್ಬಳ್ಳಿ ತಾಲೂಕು ಗಂಗಿವಾಳದ ಜ್ಞಾನ ಸಂಕಲ್ಪ ಶಾಲೆಯ ವಿಶ್ವಾಸ ಎಂಬ ವಿದ್ಯಾರ್ಥಿ ಸಿದ್ಧಾರೂಢರ ಛದ್ಮವೇಷ ಧರಿಸಿ ಎಲ್ಲರ ಗಮನ ಸೆಳೆದನು. ಹುಬ್ಬಳ್ಳಿ ಮಠದಲ್ಲಿರುವ ಸಿದ್ಧಾರೂಢರ ಮೂರ್ತಿಯಂತೆಯೇ ಬಾಲಕ ಗಂಟೆಗಟ್ಟಲೆ ಕುಳಿತಿದ್ದರಿಂದ ಇಲ್ಲಿ ಮೂರ್ತಿಯೇ ಪ್ರತಿಷ್ಠಾಪನೆಗೊಂಡಿದೆ ಎನ್ನುವಷ್ಟು ನೈಜತೆ ಕಂಡುಬಂತು. ಪ್ರತಿಭಾ ಕಾರಂಜಿ ವೀಕ್ಷಣೆಗೆ ಬಂದಿದ್ದ ಪಾಲಕರು ಮತ್ತು ಸಾರ್ವಜನಿಕರು ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು.

    ಇದೇ ವೇಳೆ ಬೋಧಿವೃಕ್ಷದಡಿ ತಪಸ್ಸಿಗೆ ಕುಳಿತ ಬುದ್ಧ, ಶ್ರೀಕೃಷ್ಣ, ಶ್ರೀದೇವಿಯ ವೇಷಧಾರಿಗಳು ಗಮನ ಸೆಳೆದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ 22 ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 26 ಸ್ಪರ್ಧೆಗಳು ಆಯೋಜನೆಗೊಂಡಿದ್ದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    Food or S*x ಯಾವುದು ನಿಮ್ಮ ಆಯ್ಕೆ? ಸೌತ್​ ಬ್ಯೂಟಿ ಸಮಂತಾ ಕೊಟ್ಟ ಉತ್ತರ ವೈರಲ್​

    ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; 11 ವರ್ಷಗಳ ನಂತರ ಬೇರ್ಪಟ್ಟ ಅಹಾನ್ ಶೆಟ್ಟಿ- ತಾನಿಯಾ ಶ್ರಾಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts