More

    Food or S*x ಯಾವುದು ನಿಮ್ಮ ಆಯ್ಕೆ? ಸೌತ್​ ಬ್ಯೂಟಿ ಸಮಂತಾ ಕೊಟ್ಟ ಉತ್ತರ ವೈರಲ್​

    ಹೈದರಾಬಾದ್​: ಸೌತ್​ ಬ್ಯೂಟಿ ಸಮಂತಾ ಬಗ್ಗೆ ಹೆಚ್ಚಿಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ರಾಜಮೌಳಿ ನಿರ್ದೇಶನ ‘ಈಗ’ ಚಿತ್ರದಲ್ಲಿ ಕಿಚ್ಚ ಸುದೀಪ್​ ಜತೆ ನಟಿಸಿ ಕನ್ನಡಿಗರಿಗೆ ಪರಿಚಿತರಾದ ಸಮಂತಾ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸ್ಟಾರ್​ ನಟರೊಂದಿಗೆ ನಟಿಸಿ, ಸ್ಟಾರ್​ ನಟಿಯರ ಸಾಲಿಗೆ ಸೇರಿ, ಚಿತ್ರರಂಗದಲ್ಲಿ ಬಿಜಿಯಾಗಿರುವಾಗಲೇ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಹಾಗೂ ನಟ ನಾಗಚೈತನ್ಯ ಅವರನ್ನು ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಡಿವೋರ್ಸ್​ ಪಡೆದು ಭಾರಿ ಸುದ್ದಿಯಾದ ಸಮಂತಾ ಇದೀಗ ಸಿನಿಮಾದಲ್ಲಿ ಮತ್ತೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಪುಷ್ಪ ಚಿತ್ರದಲ್ಲಿ ಊ ಅಂಟಾವಾ ಮಾಮಾ ಊಊ ಅಂಟಾವಾ ಹಾಡಿನ ಮೂಲಕ ಎಲ್ಲರ ಗಮನ ಸೆಳೆದ ಸಮಂತಾ ಇದೀಗ ತಮಿಳು ಹಾಗೂ ತೆಲುಗಿಗೆ ಮಾತ್ರ ಸೀಮಿತವಾಗದೆ ಬಾಲಿವುಡ್​ ಹಾಗೂ ಹಾಲಿವುಡ್​ನಲ್ಲಿಯೂ ತಮ್ಮ ಅಭಿನಯವನ್ನು ಸಾಬೀತು ಪಡಿಸಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಮಂತಾ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗುತ್ತಿದೆ.

    ವಿಡಿಯೋದಲ್ಲಿ ಆ್ಯಂಕರ್​ ಊಟ ಅಥವಾ ಸೆಕ್ಸ್​ ಎರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂದು ಸಮಂತಾರನ್ನು ಕೇಳುತ್ತಾರೆ. ಪ್ರಶ್ನೆ ಕೇಳಿ ಕೆಲ ಕಾಲ ಯೋಚನೆ ಮಾಡುವ ಸಮಂತಾ, ಬಳಿಕ ನಗುತ್ತಲೇ ಸೆಕ್ಸ್​ ಎಂದು ಹೇಳುತ್ತಾರೆ. ಯಾವುದೇ ದಿನವಾಗಿರಲಿ ನಾನು ಸೆಕ್ಸ್​ ಆರಿಸಿಕೊಳ್ಳುತ್ತೇನೆ. ನಾನು ಸುಲಭವಾಗಿ ಹಸಿವಿನಿಂದ ಬಳಲುತ್ತೇನೆ ಎಂದು ನಗುತ್ತಲೇ ಉತ್ತರಿಸಿದ್ದಾರೆ.

    ಇದೀಗ ವಿಡಿಯೋ ಮತ್ತೊಮ್ಮೆ ವೈರಲ್​ ಆಗಿದ್ದು, ಅನೇಕರು ಕಾಮೆಂಟ್​ ಬಾಕ್ಸ್​ನಲ್ಲಿ ಸಮಂತಾರಿಗೆ ಬೆಂಬಲ ಸೂಚಿಸಿದ್ದಾರೆ. ಯಾವುದೇ ಮುಜುಗರವಿಲ್ಲದೆ ಪ್ರಮಾಣಿಕವಾಗಿ ಮಾತನಾಡಿದ್ದಾರೆ ಎಂದು ಸಮಂತಾರನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಕೆಲವು ಮಂದಿ ಸಮಂತಾರನ್ನು ಟೀಕಿಸಿ, ಆಕೆಯ ಆಯ್ಕೆಯನ್ನು ಮದುವೆಯೊಂದಿಗೆ ತಳುಕು ಹಾಕಿ ವ್ಯಂಗ್ಯವಾಡಿದ್ದಾರೆ.

    ವೇಸ್ಟ್​ ಆಫ್​ ಮನಿ
    ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಫಾಲೋವರ್ಸ್​ ಜತೆ ಪ್ರಶ್ನೋತ್ತರ ಸೆಷನ್​ ನಡೆಸಿದ್ದರು. ಈ ವೇಳೆ ಅಭಿಮಾನಿಯೊ​ಬ್ಬರು ಎರಡನೇ ಮದುವೆ ಬಗ್ಗೆ ಯೋಚನೆ ಇಲ್ವಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ನಗು ಮೊಗದ ಎಮೋಜಿ ಹಾಕಿ, ಎರಡನೇ ಮತ್ತು ಮೂರನೇ ಮದುವೆಗಳ ವಿಚ್ಛೇದನ ದರದ ಅಂಕಿ-ಅಂಶಗಳನ್ನು ಹಂಚಿಕೊಂಡು, ಅಂಕಿ-ಅಂಶಗಳ ಪ್ರಕಾರ ಇದು ಇದು ಹಣದ ವ್ಯರ್ಥ ಅಥವಾ ವೇಸ್ಟ್​ ಆಫ್​ ಮನಿ ಎಂದು ಹೇಳಿದ್ದರು.

    ನಟನೆಯೊಂದಿಗೆ ನಿರ್ಮಾಣ
    ಸಮಂತಾ ಅವರು ಇತ್ತೀಚೆಗಷ್ಟೇ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ‘ತ್ರಲಾಲಾ’ ಮೂವಿಂಗ್ ಪಿಕ್ಚರ್ಸ್ ಅನ್ನು ಅನಾವರಣಗೊಳಿಸಿದ್ದು, ನಿರ್ಮಾಪಕಿಯಾಗಿಯೂ ಹೊಸ ಪಯಣ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಎರಡನೇ ಮದುವೆ ಬಗ್ಗೆ ಯೋಚನೆ ಇಲ್ವಾ? ಫ್ಯಾನ್​​ ಪ್ರಶ್ನೆಗೆ ನಟಿ ಸಮಂತಾ ಕೊಟ್ಟರು ಸಖತ್​ ಉತ್ತರ….

    ಹುಬ್ಬೇರಿಸುವಂತಿದೆ ಸಲಿಂಗಕಾಮಿ ಜೋಡಿ ಮದುವೆ ಕುರಿತು ಸಮಂತಾ ಮಾಡಿರುವ ಪೋಸ್ಟ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts