More

    ಬಾಕ್ಸ್​ಆಫೀಸ್​ನಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದ ಪ್ರಶಾಂತ್​ ನೀಲ್​; ಸಲಾರ್​ ಸುನಾಮಿಗೆ ಗಲ್ಲಾಪೆಟ್ಟಿಗೆ ದಾಖಲೆ ಉಡೀಸ್

    ಬೆಂಗಳೂರು: ಯಂಗ್​ ರೆಬೆಲ್​​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ನಟನೆಯ, ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ ಸಲಾರ್​ ಚಿತ್ರ ಶುಕ್ರವಾರ (ಡಿಸೆಂಬರ್ 22) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಬಿಡುಗಡೆಯಾದ ಮೊದಲ ದಿನವೇ ಹಲವು ದಾಖಲೆಗಳನ್ನು ಸಲಾರ್​ ಪುಡಿ ಮಾಡಿದ್ದು, ಮೊದಲ ದಿನವೇ 178.7 ಕೋಟಿ ಗಳಿಕೆ ಕಂಡಿದೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ನಟ ಪೃಥ್ವಿರಾಜ್​ ಸುಕುಮಾರನ್​, ದ ಮೋಸ್ಟ್​ ವೈಲೆಂಟ್​ ಮ್ಯಾನ್​ ಅನೌನ್ಸ್​​​ಡ್​​ ಹಿಸ್​ ಅರೈವಲ್,​ 2023ರಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಚಲನಚಿತ್ರಕ್ಕೆ ಇದು ದೊಡ್ಡಮಟ್ಟದ ಓಪನಿಂಗ್​ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ಸೂರ್ಯಕುಮಾರ್​ ಯಾದವ್​ ಔಟ್; ಕಾರಣ ಹೀಗಿದೆ

    ಸಲಾರ್ ಬಿಡುಗಡೆಯಾದ ಮೊದಲ ದಿನ ವಿಶ್ವದಾದ್ಯಂತ 178.7 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಭಾರತದ ಬಾಕ್ಸ್​ಆಫೀಸ್​ನಲ್ಲಿ ಅಂದಾಜು 95 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂದು ಹೇಳಲಾಗುತ್ತಿದೆ. ಡಂಕಿಗೆ ಹೋಲಿಸಿದರೆ, ಸಲಾರ್​ ಮೊದಲ ದಿನದ ಕಲೆಕ್ಷನ್​​ನಲ್ಲಿ ಮುಂದಿದೆ. ದಕ್ಷಿಣ ಭಾರತದ ಸಿನಿಮಾವೊಂದು ಮತ್ತೊಮ್ಮೆ ಬಾಲಿವುಡ್ ಚಿತ್ರಕ್ಕೆ ಸೆಡ್ಡು ಹೊಡೆದು, ಬಾಕ್ಸ್ ಆಫೀಸಿನಲ್ಲಿ ಮುನ್ನುಗ್ಗುತ್ತಿರುವುದು ಎಲ್ಲರ ಹುಬ್ಬೇರಿಸಿದೆ.

    ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್​ ಸುಕುಮಾರನ್, ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ. ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದು, ಚಿತ್ರ ಡಿಸೆಂಬರ್​ 22ರಂದು ವಿಶ್ವದಾದ್ಯಂತ ತೆರೆಕಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts