ಪ್ರಿಯತಮನಿಗೆ ಜಾಮೀನು ಕೊಡಿಸಲು ಒಪ್ಪದ ಅಪ್ಪ; ಸಿಟ್ಟಿಗೆದ್ದ ಅಪ್ರಾಪ್ತೆ ಹೀಗಾ ಮಾಡೋದು?

girl
Published on

ಗಾಂಧಿನಗರ: ಪ್ರೀತಿ ತಪ್ಪಲ್ಲ. ಆದರೆ ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಮಾಡಿ, ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು. ಅದೇ ರೀತಿಯ ತಪ್ಪನ್ನು ಮಾಡಿದ್ದ ಮಗಳಿಗೆ ಬುದ್ಧಿ ಕಲಿಸಲು ಹೋದ ತಂದೆ ಇದೀಗ ಕಣ್ಣೀರು ಸುರಿಸುತ್ತಿರುವ ಘಟನೆ ಗುಜರಾತ್​ನ ರಾಜಕೋಟ್​ನಲ್ಲಿ ನಡೆದಿದೆ.

ರಾಜಕೋಟ್​ ಜಿಲ್ಲೆಯ ಜಮ್ಖಾಂಬಲಿಯಾ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 17 ವರ್ಷದ ಯುವತಿ 21 ವರ್ಷದ ಯುವಕನನ್ನು ಪ್ರೀತಿಸಿದ್ದಳು. ಆತನನ್ನೇ ಮದುವೆಯಾಗುವುದಾಗಿ ತಂದೆಯ ಬಳಿ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ತಂದೆ, ಪೋಸ್ಕೋ ಕಾನೂನಿನಡಿ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ತಂದೆಯ ಆರೋಪದ ಹಿನ್ನೆಲೆಯಲ್ಲಿ ಯುವಕನನ್ನು ಎರಡು ತಿಂಗಳ ಹಿಂದೆಯೇ ಪೊಲೀಸರು ಬಂಧಿಸಿದ್ದಾರೆ.

ಪ್ರಿಯತಮನನ್ನು ಬಂಧಿಸಿದ ಮೇಲೆಯೂ ಆತನ ಪ್ರೀತಿಯಿಂದ ಹೊರಬರದ ಯುವತಿ ಆತನಿಗೆ ಜಾಮೀನು ನೀಡಿ ಠಾಣೆಯಿಂದ ಬಿಡಿಸಲು ಅಪ್ಪನ ಬೆನ್ನು ಬಿದ್ದಿದ್ದಾಳೆ. ಆದರೆ ಮಗಳು ಏನೇ ಹೇಳಿದರೂ ಕೇಳದ ಅಪ್ಪ, ಜಾಮೀನು ನೀಡಲು ಒಪ್ಪಿಲ್ಲ. ಇದರಿಂದ ಸಿಟ್ಟಿಗೆದ್ದ ಯುವತಿ ಡಿಸೆಂಬರ್​ 31ರಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಪ್ರೀತಿಗೆ ನಿರಾಕರಿಸಿದ್ದ ಅಪ್ಪ ಇದೀಗ ಮಗಳನ್ನೇ ಕಳೆದುಕೊಂಡ ನೋವಿನಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net