ಅಕ್ಟೋಬರ್ 19ಕ್ಕೆ ಕನ್ನಡದಲ್ಲಿ 'ಘೋಸ್ಟ್'​​; ತೆಲುಗು ಆವೃತ್ತಿಯ ರಿಲೀಸ್​ ಮುಂದೂಡಿಕೆ!

Untitled design - 2023-10-16T131921.078
Published on

​ಬೆಂಗಳೂರು: ಸ್ಯಾಂಡಲ್​ವುಡ್​ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್​ ಹೀರೋ ನಟ ಶಿವರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ 'ಘೋಸ್ಟ್'​ ಇದೇ ಅಕ್ಟೋಬರ್​ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆಯಲು ಸಜ್ಜಾಗಿದೆ. ಈ ಮಧ್ಯೆ ತೆಲುಗು ಭಾಷೆಯಲ್ಲಿ ಚಿತ್ರ ಬೇರೆ ದಿನದಂದು ಬಿಡುಗಡೆಯಾಗಲಿದ್ದು, ಇದೀಗ ಹೊಸ ದಿನಾಂಕಕ್ಕೆ ಮುಂದೂಡಲಾಗಿದೆ.

'ಓಲ್ಡ್​ ಮಾಂಕ್'​ ಖ್ಯಾತಿಯ ಶ್ರೀನಿ ನಿರ್ದೇಶನದ ಆಕ್ಷನ್, ಡ್ರಾಮಾ 'ಘೋಸ್ಟ್‌' ಬಿಡುಗಡೆಗೂ ಮುನ್ನವೇ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸದ್ಯ ಈ ಚಿತ್ರದ ತೆಲುಗು ಆವೃತ್ತಿಯ ಬಿಡುಗಡೆ ದಿನಾಂಕದಲ್ಲಿ ಇದೀಗ ಮೂಂಡೂಡಿಕೆ ಮಾಡಲಾಗಿದೆ. ಘೋಸ್ಟ್‌ನ ತೆಲುಗು ಆವೃತ್ತಿಯು ಅಕ್ಟೋಬರ್ 27, 2023 ರಂದು ಥಿಯೇಟರ್‌ಗಳಿಗೆ ಬರಲಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.

'ಘೋಸ್ಟ್‌' ಚಿತ್ರದಲ್ಲಿ ಜಯರಾಮ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್ ಮುಂತಾದವರ ತಾರಾಗಣವಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್​ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net