ಭಾರತೀಯ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ಪ್ರಯೋಜನಕಾರಿ ಶಿಷ್ಯವೃತ್ತಿ ನಡೆಸುವ ಅವಕಾಶ

Published on

ಬೆಂಗಳೂರು:
ನೆಟ್ಟೂರ್ ಟೆಕ್ನಿಕಲ್ ಟ್ರೇನಿಂಗ್ ಫೌಂಡೇಶನ್ (ಎನ್‌ಟಿಟಿಎ್) ಸಂಸ್ಥೆಯು ಮ್ಯಾಜಿಕ್ ಬಿಲಿಯನ್ ಮತ್ತು ಐಎಚ್‌ಕೆ, ಜರ್ಮನಿ ಜತೆ ಹೊಸ ಒಪ್ಪಂದ ಮಾಡಿಕೊಂಡಿದೆ.
ಯುವ ಉತ್ಸಾಹಿ ಭಾರತೀಯರಿಗೆ ಪರಿವರ್ತಕ ವೃತ್ತಿ ಅವಕಾಶವನ್ನು ನೀಡಲು ಈ ಕಾರ್ಯತಂತ್ರದ ಪಾಲುದಾರಿಕೆಯನ್ನು ಮಾಡಿಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ದೀರ್ಘಾವಧಿಯ (ಶಿಷ್ಯವೃತ್ತಿ) ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮ ಪ್ರಾರಂಭಿಸಲು ಅವಕಾಶ ದೊರೆತಿದೆ. ಆಟೋಮೋಟಿವ್ ಮೆಕಾಟ್ರಾನಿಕ್ಸ್, ಪ್ಲಾಂಟ್ ಮೆಕ್ಯಾನಿಕ್ಸ್, ಎಲೆಕ್ಟ್ರಾನಿಕ್ಸ್, ಕಾರ್ ಟೆಕ್ನಾಲಜಿ ಮತ್ತು ಕಟಿಂಗ್ ಮೆಷಿನ್ ಟೆಕ್ನಾಲಜಿಯಂತಹ ಹೆಚ್ಚಿನ ಬೇಡಿಕೆಯ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿದೆ.
ಬೆಂಗಳೂರಿನ ಡೆಪ್ಯೂಟಿ ಜರ್ಮನ್ ಕಾನ್ಸುಲರ್ ಎಂಎಸ್ ಆನೆಟ್ ಬೇಸ್ಲರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್‌ಟಿಟಿಎ್ ಮುಖ್ಯಸ್ಥ ಆರ್.ರಾಜಗೋಪಾಲನ್, ಬಿ ವಿ ಸುದರ್ಶನ್ ಮತ್ತು ನೋಯ್ಡದ ಮ್ಯಾಜಿಕ್ ಬಿಲಿಯನ್ ಸಂಸ್ಥಾಪಕ ಬಸಾಬ್ ಬ್ಯಾನರ್ಜಿ ಉಪಸ್ಥಿತರಿದ್ದರು.
ಈಗಾಗಲೇ, 100 ಎನ್‌ಟಿಟಿಎ್ ವಿದ್ಯಾರ್ಥಿಗಳನ್ನು ಉನ್ನತ ಹಾಗೂ ಅಸಾಧಾರಣ ಅವಕಾಶಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಅವರಲ್ಲಿ 70 ಜನರು ಈಗಾಗಲೇ ಪ್ರತಿಷ್ಠಿತ ಜರ್ಮನ್ ಕಂಪನಿಗಳಿಂದ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಸೇರುವ ಮೂಲಕ, ವಿದ್ಯಾರ್ಥಿಗಳು ಅಮೂಲ್ಯವಾದ ಕೌಶಲ್ಯಗಳನ್ನು ಗಳಿಸುವುದಲ್ಲದೆ 2100 ಯುರೋಗಳ ಸಂಭಾವ್ಯ ಕನಿಷ್ಠ ಖಾತರಿಯ ಮಾಸಿಕ ಗಳಿಕೆಯೊಂದಿಗೆ ಯುರೋಪಿನಲ್ಲಿ ವೃತ್ತಿಜೀವನ ಆರಂಭಿಸುವ ಅವಕಾಶದ ಬಾಗಿಲು ತೆರೆದುಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net