ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ಟೀಮ್​​ಗಳಿಂದ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಗೂಗಲ್| Google

google new 12
Published on

Google | ಗೂಗಲ್​ ಕಂಪನಿಯು ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ಟೀಮ್​​ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ, ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಆಂಡ್ರಾಯ್ಡ್ ಸಾಫ್ಟ್​​ವೇರ್, ಪಿಕ್ಸೆಲ್ ಫೋನ್, ಕ್ರೋಮ್ ಬ್ರೌಸರ್ ಉತ್ಪನ್ನಗಳನ್ನು ನಿಭಾಯಿಸುವ ತಂಡಗಳಲ್ಲಿ ಈ ಲೇ ಆಫ್ ಮಾಡಲಾಗಿದೆ.

ಈ ಬಗ್ಗೆ ಗೂಗಲ್​ ಕಂಪನಿಯ ವಕ್ತಾರರು ಪ್ರತಿಕ್ರಿಯಿಸಿದ್ದು, ಜನವರಿಯಲ್ಲಿ ಉದ್ಯೋಗಿಗಳ ವಜಾಕ್ಕೆ ನಿರ್ಧರಿಸಲಾಗಿತ್ತು. ಸ್ವಯಂಪ್ರೇರಿತವಾಗಿ ಉದ್ಯೋಗ ತೊರೆಯುವಂತೆ ಸೂಚಿಸಲಾಗಿತ್ತು, ಉತ್ತಮವಾದ ಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕಂಪನಿಗಳು ಡೇಟಾ ಸೆಂಟರ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಗೆ ಬಂಡವಾಳ ಹೂಡುತ್ತಿವೆ. ಆದ ಕಾರಣ, ಇತರೆ ವಲಯಗಳಲ್ಲಿ ಹೂಡಿಕೆ ಪ್ರಮಾಣವನ್ನು ತಗ್ಗಿಸುತ್ತಿವೆ. ಹಾಗಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

2,000 ಮಂದಿಯನ್ನು ವಜಾಗೊಳಿಸಿದ್ದ ಗೂಗಲ್

2023ರಲ್ಲಿ ಟೆಕ್ ಕ್ಷೇತ್ರದಲ್ಲಿ ಇದ್ದ ಟ್ರೆಂಡ್​​ನಂತೆ ಗೂಗಲ್ ಸಂಸ್ಥೆ ಆ ವರ್ಷ 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತು. ಅದರ ನೂರಕ್ಕೆ ಆರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಆ ವರ್ಷ ಗೂಗಲ್ ಮಾತ್ರವಲ್ಲ, ಮೆಟಾ ಮತ್ತು ಅಮೇಜಾನ್ ಕಂಪನಿಗಳೂ ಕೂಡ ಸಾವಿರಾರು ಮಂದಿಯನ್ನು ಲೇ ಆಫ್ ಮಾಡಿದ್ದವು.

2024 ಮತ್ತು ಈಗ 2025ರಲ್ಲೂ ಗೂಗಲ್ ನೂರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net