ನಿಮ್ಮ ಮಗು ಎತ್ತರವಾಗಿ ಬೆಳೆಯುತ್ತಿಲ್ಲವೇ? ಹಾಗಾದ್ರೆ ಈ ವಿಟಮಿನ್​ಗಳ ಕೊರತೆ ಇರಬಹುದು|Height

CHILDREN 2
Published on

Health : ನಿಮ್ಮ ಮಗುವಿಗೆ ವಯಸ್ಸಾದಂತೆ ಎತ್ತರದಲ್ಲಿ ಸಮಸ್ಯೆ ಕಂಡುಬರುತ್ತಿದೆ ಎಂದರೆ ಆತನ/ಆತಳ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿರುತ್ತದೆ. ಮಕ್ಕಳು ಎತ್ತರವಾಗಿ ಬೆಳೆಯದಿರಲು ಹಲವು ಕಾರಣಗಳಿವೆ. ಅವರು ಸೇವಿಸುವ ಆಹಾರದಲ್ಲಿ ಕೆಲವು ಪ್ರಮುಖ ಪೋಷಕಾಂಶಗಳ ಕೊರತೆ ಕಂಡುಬಂದರೆ ದೇಹದ ಬೆಳವಣಿಗೆ ಕುಂಠಿತವಾಗುತ್ತದೆ.

ವಿಟಮಿನ್ ಎ:

ಜೀವಕೋಶಗಳ ಬೆಳವಣಿಗೆಗೆ ವಿಟಮಿನ್ ಎ ಬಹಳ ಮುಖ್ಯವಾಗಿದೆ. ಇದು ಮೂಳೆಯ ಉದ್ದವನ್ನು ಹೆಚ್ಚಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು  ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಮಕ್ಕಳಿಗೆ ಕ್ಯಾರೆಟ್, ಪಪ್ಪಾಯಿ, ಹಾಲು, ಮೊಟ್ಟೆ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ತಿನ್ನಿಸುವುದು ಉತ್ತಮ.

ವಿಟಮಿನ್ ಸಿ:

ಮೂಳೆಗಳು ಮತ್ತು ಅಂಗಾಂಶಗಳ ರಚನೆಗೆ ಈ ವಿಟಮಿನ್ ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಬೆಳವಣಿಗೆಯ ಹಾರ್ಮೋನುಗಳಿಗೆ ಇದು ಮುಖ್ಯವಾಗಿದೆ. ಕಿತ್ತಳೆ, ನಿಂಬೆಹಣ್ಣು, ನೆಲ್ಲಿಕಾಯಿ, ಪೇರಲ ಮತ್ತು ಟೊಮೆಟೊಗಳಂತಹ ಆಹಾರಗಳು ವಿಟಮಿನ್ 'ಸಿ' ಯಲ್ಲಿ ಹೆಚ್ಚಾಗಿದೆ.

ವಿಟಮಿನ್ ಡಿ:

ಇದು ಮೂಳೆಗಳನ್ನು ಬಲಪಡಿಸುವ ಮೂಲಕ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಕೊರತೆಯಿಂದಾಗಿ, ದೇಹದ ಎತ್ತರದ ಬೆಳವಣಿಗೆ ಕುಂಠಿತಗೊಳ್ಳಬಹುದು. ಹಾಗಾಗಿ ಮಕ್ಕಳ ಆಹಾರದಲ್ಲಿ ಹಾಲು, ಮೊಟ್ಟೆ, ಮೀನು ಮತ್ತು ಅಣಬೆಗಳನ್ನು ಸೇರಿಸಬೇಕಾಗಿರುತ್ತದೆ. ಹಗಲಿನಲ್ಲಿ ಸ್ವಲ್ಪ ಸಮಯದವರೆಗೆ ಅವರನ್ನು ಹೊರಗೆ ಬಿಸಿಲಿನಲ್ಲಿ ಕರೆದುಕೊಂಡು ಹೋಗಿ ಸ್ವಲ್ಪ ಸಮಯದವರೆಗೆ ಬಿಸಿಲಿನ ತಾಪದಲ್ಲಿರಿಸಿ.

ವಿಟಮಿನ್ ಬಿ 12:

ಈ ವಿಟಮಿನ್ ಕೋಶ ವಿಭಜನೆ ಮತ್ತು ಡಿಎನ್ಎ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ. ಇದು ದೇಹದ ಸರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಇದಕ್ಕಾಗಿ ನಿಮ್ಮ ಮಗುವಿನ ತಟ್ಟೆಯಲ್ಲಿ ಹಾಲು, ಮೊಟ್ಟೆ, ಮೊಸರು ಮತ್ತು ಕೆಲವು ಮಾಂಸಾಹಾರಿ ಆಹಾರಗಳನ್ನು ಕೊಡುವುದನ್ನು ಮರೆಯಬೇಡಿ.

ವಿಟಮಿನ್ ಕೆ :

ವಿಟಮಿನ್ ಕೆ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಕೊರತೆಯು ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ನೀವು ಹಸಿರು ತರಕಾರಿಗಳು, ಬ್ರೊಕೊಲಿ, ಪಾಲಕ್ ಮತ್ತು ಹೂಕೋಸುಗಳಿಂದ ವಿಟಮಿನ್ ಕೆ ಅನ್ನು ಪಡೆಯಬಹುದು ಮತ್ತು ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

ಪೋಷಕರು ಗಮನಿಸಬೇಕಾದ ಅಂಶಗಳು:

(ಏಜೆನ್ಸೀಸ್)

ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಮಕ್ಕಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಮಕ್ಕಳಿಗೆ ಹಾಲು ಕುಡಿಸುವುದರ ಜೊತೆಗೆ ನಿದ್ರೆ, ವ್ಯಾಯಾಮ ಮತ್ತು ಕುಡಿಯುವ ನೀರು ಕೂಡ ಅಷ್ಟೇ ಮುಖ್ಯ. ಮಕ್ಕಳನ್ನು ಪ್ರತಿದಿನ ಬಿಸಿಲಿನಲ್ಲಿ ಆಟವಾಡಲು ಬಿಡಿ, ವಾರದಲ್ಲಿ 3 ರಿಂದ 4 ದಿನಗಳು ಕನಿಷ್ಠ 20 ರಿಂದ 30 ನಿಮಿಷಗಳ ಕಾಲ ಮೈದಾನದಲ್ಲಿ ಆಟಗಳನ್ನು ಆಡಲು ಬಿಡಬೇಕು. ಸಮಾನ ಪ್ರಮಾಣದ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಮಕ್ಕಳಿಗೆ ನೀಡಿ, ಬೆಳವಣಿಗೆ ನಿಂತಿದ್ದರೆ ಮಕ್ಕಳ ವೈದ್ಯರಿಂದ ಪರೀಕ್ಷೆ ಮಾಡಿಸುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net