ಇಂದು ರಾತ್ರಿ ಭೂಮಿಯನ್ನು ಹಾದು ಹೋಗಲಿದೆ ಕ್ಷುದ್ರಗ್ರಹ; ಭಯಪಡುವ ಅವಶ್ಯಕತೆಯಿಲ್ಲ ಎಂದ ನಾಸಾ| Asteroid

asteroid
Published on

ಅಂದಹಾಗೆ 2023 KU ಎಂಬ ಹೆಸರಿನ ಬೃಹತ್ ಕ್ಷುದ್ರಗ್ರಹವು ಇಂದು ಅಂದರೆ ಏಪ್ರಿಲ್ 11, 2025 ರಂದು ರಾತ್ರಿ 9:05 ಕ್ಕೆ ಸುಮಾರಿಗೆ ಭೂಮಿಯ ಮೂಲಕ ಹಾದು ಹೋಗುತ್ತದೆ ಎಂದು ಹೇಳಲಾಗಿದೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ. ಈ ಕ್ಷುದ್ರ ಗ್ರಹವು 113 ಮೀಟರ್ ಅಗಲವಿದ್ದು, ಸರಿಸುಮಾರು 35 ಅಂತಸ್ತಿನ ಕಟ್ಟಡದ ಎತ್ತರವಿದೆ ಎನ್ನಲಾಗಿದೆ. ಇದು ಖಗೋಳಶಾಸ್ತ್ರಜ್ಞರಿಗೆ ಭೂಮಿಯ ಸಮೀಪ ಹಾದುಹೋಗುವ ದೊಡ್ಡ ವಸ್ತುವನ್ನು ಹತ್ತಿರದಿಂದ ಅಧ್ಯಯನ ಮಾಡಲು ಅಪರೂಪದ ಅವಕಾಶವನ್ನು ನೀಡುತ್ತದೆ.

Asteroid | ಸೌರಮಂಡಲದಲ್ಲಿರುವ ಕ್ಷುದ್ರಗಹಗಳು ಕೆಲವೊಮ್ಮೆ ಭೂಮಿಯ ಸಮೀಪವೇ ಹಾದು ಹೋಗುತ್ತವೆ. ಈ ಬಗ್ಗೆ ವಿಜ್ಞಾನಿಗಳು ಆಗಾಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಅದೇ ರೀತಿ 35 ಅಂತಸ್ತಿನ ಕಟ್ಟಡದ ಎತ್ತರವಿರುವ ಕ್ಷುದ್ರಗ್ರಹವೊಂದು ಭೂಮಿಯನ್ನು ಹಾದು ಹೋಗಲಿದೆ ಎಂದು ನಾಸಾ ಹೇಳಿದೆ.

ಈ ಕ್ಷುದ್ರಗ್ರಹವು ಅಪೋಲೋ ಗುಂಪಿಗೆ ಸೇರಿದ್ದು, ಭೂಮಿಯ ಕಕ್ಷೆಯನ್ನು ದಾಟಲು ಹೆಸರುವಾಸಿಯಾದ NEO ಗಳ ವರ್ಗವಾಗಿದೆ. ಗುರುತ್ವಾಕರ್ಷಣೆ ಅಥವಾ ಟ್ರ್ಯಾಕಿಂಗ್ ಸಮಸ್ಯೆಯಿಂದ ಉಂಟಾಗುವ ವೇಗ ಅಥವಾ ದಿಕ್ಕಿನಲ್ಲಿನ ಸಣ್ಣ ಬದಲಾವಣೆಗಳು ಅವುಗಳು ಹಾದುಹೋಗುವ ಮಾರ್ಗಗಳನ್ನು ಬದಲಾಯಿಸಬಹುದು.

2023 KU ಗಂಟೆಗೆ 64,800 ಕಿಮೀ ವೇಗದಲ್ಲಿ ಬಾಹ್ಯಾಕಾಶದ ಮೂಲಕ ಧಾವಿಸುತ್ತಿದೆ. ಇದು ಭೂಮಿಯನ್ನು ಅಪ್ಪಳಿಸದಿದ್ದರೂ ಒಂದು ಮಿಲಿಯನ್ ಕಿಲೋಮೀಟರ್ ಒಳಗೆ ಹಾದುಹೋಗುತ್ತದೆ. ಇದು ಭೂಮಿ ಹಾಗೂ ಚಂದ್ರನ ಎರಡು ಪಟ್ಟು ಹೆಚ್ಚು ದೂರದಲ್ಲಿದೆ ಎಂದು ನಾಸಾ ತಿಳಿಸಿದೆ.

ಕ್ಷುದ್ರ ಗ್ರಹ ವೀಕ್ಷಿಸಲಿರುವ ವಿಜ್ಞಾನಿಗಳು

(ಏಜೆನ್ಸೀಸ್)

2023 KU ಪ್ರಸ್ತುತ ಯಾವುದೇ ಅಪಾಯವನ್ನು ಉಂಟು ಮಾಡದಿದ್ದರೂ, ಇದು ಜಾಗರೂಕತೆಯ ನಿರಂತರ ಅಗತ್ಯವನ್ನು ನೆನಪಿಸುತ್ತದೆ. ಹಾಗಾಗಿ ಭವಿಷ್ಯದ ಬೆದರಿಕೆಗಳಿಂದ ಭೂಮಿಯನ್ನು ರಕ್ಷಿಸಲು ನಿರಂತರ ಟ್ರ್ಯಾಕಿಂಗ್ ಮತ್ತು ಸುಧಾರಿತ ವ್ಯವಸ್ಥೆಗಳು ಅತ್ಯಗತ್ಯವಾಗಿವೆ.

ಈ ಬಾರಿ ಯಾವುದೇ ಭಯ ಇಲ್ಲ ಎಂದು ನಾಸಾ ದೃಢಪಡಿಸಿದರೂ ಸಹ ತಜ್ಞರು ಜಾಗರೂಕರಾಗಿದ್ದಾರೆ. ಕ್ಷುದ್ರಗ್ರಹದ ಕಕ್ಷೆಯಲ್ಲಿನ ಸ್ವಲ್ಪ ಬದಲಾವಣೆಗಳು ಸಹ ಸುರಕ್ಷಿತ ಮಾರ್ಗವನ್ನು ಭವಿಷ್ಯದ ಅಪಾಯವಾಗಿ ಪರಿವರ್ತಿಸಬಹುದು. ಕೇವಲ 18 ಮೀಟರ್ ಅಗಲವಿರುವ 2013 ರಚೆಲ್ಯಾಬಿನ್ಸ್ಕ್ ಉಲ್ಕಾಶಿಲೆ ರಷ್ಯಾದಲ್ಲಿ 1,500 ಜನರನ್ನು ಗಾಯಗೊಳಿಸಿತು. ಈ ಗ್ರಹ ಅದರ ಗಾತ್ರಕ್ಕಿಂತ ಆರು ಪಟ್ಟು ಹೆಚ್ಚಾಗಿದ್ದು, 2023 KU ಭೂಮಿಗೆ ಡಿಕ್ಕಿ ಹೊಡೆದರೆ ಅದು ಹೆಚ್ಚು ವಿನಾಶವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net