ಒಂದಲ್ಲಾ ಎರಡಲ್ಲಾ 'ಏಳು' ಬಂಗಾಳ ಹುಲಿಗಳನ್ನು ಮನೆಯಲ್ಲಿ ಸಾಕಿದ್ದ 71 ವರ್ಷ ವೃದ್ಧನ ಬಂಧನ; Tiger

Tiger Claw
Published on

ಭಾವನಾತ್ಮಕ ಸಂಬಂಧ ಹೊಂದಿರುವ ಪ್ರಾಣಿಗಳಲ್ಲಿ ಹುಲಿಗಳು ಸಹ ಸೇರಿವೆ. ನೀವು ಅಂತಹ ಪ್ರಾಣಿಗಳನ್ನು ಸಾಕಲು ಬಯಸಿದರೆ, ಸರ್ಕಾರದಿಂದ ವಿಶೇಷ ಪರವಾನಗಿಯನ್ನು ಪಡೆಯಬೇಕು. ಆದಾಗ್ಯೂ ಇದೆಲ್ಲದರ ಹೊರತಾಗಿ ಕಾರ್ಲ್ ಮೈಕೆಲ್ ಎಂಬ 71 ವರ್ಷದ ವ್ಯಕ್ತಿಯೊಬ್ಬರು ಅಮೆರಿಕದ ನೆವಾಡಾ ರಾಜ್ಯದ ತಮ್ಮ ಮನೆಯಲ್ಲಿ ಏಳು ಬಂಗಾಳ ಹುಲಿಗಳನ್ನು ಸಾಕಿದ್ದಾರೆ. ಇನ್ನೂ ಈ ಬಂಗಾಳ ಹುಲಿಗಳನ್ನು ಸಾಕಲು ಕಾರ್ಲ್ ಮೈಕೆಲ್ ಪರವಾನಗಿ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕ| ಮನೆಗಳಲ್ಲಿ ಈ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ ಹಾಗೂ ಕುರಿ ಮೇಕೆಗಳಂತಹ ಪ್ರಾಣಿಗಳನ್ನು ಸಾಕುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವೃದ್ಧ ಬರೋಬ್ಬರಿ ಏಳು ಹುಲಿಗಳನ್ನ ತನ್ನ ಮಕ್ಕಳಂತೆ ಸಾಕಿ ಸಲಹುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಕಾರ್ಲ್ ಮೈಕೆಲ್, ಲಾಸ್ ವೇಗಾಸ್‌ನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ನೆವಾಡಾದ ಪಹ್ರಂಪ್‌ನಲ್ಲಿ ವಾಸವಾಗಿದ್ದಾರೆ. ಈತ ಹುಲಿಗಳನ್ನು ಸಾಕಿದ್ದ ಆರೋಪದ ಮೇರೆಗೆ ನೈ ಕೌಂಟಿ ಅಧಿಕಾರಿಗಳು ಸುಮಾರು ಏಳು ಹುಲಿಗಳನ್ನು ಪತ್ತೆಹಚ್ಚಿ ಕಾರ್ಲ್‌ನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಬಂಧನವನ್ನು ವಿರೋಧಿಸಿದ್ದಕ್ಕಾಗಿ ಮತ್ತು ಬಂದೂಕು ಹೊಂದಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಲ್ ಮೈಕೆಲ್ ತನ್ನ ಏಳು ಬಂಗಾಳ ಹುಲಿಗಳನ್ನು ತನ್ನ ಮರುಭೂಮಿಯಲ್ಲಿ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಮತ್ತು ನೆರೆಹೊರೆಯವರು ಹುಲಿಗಳೊಂದಿಗೆ ಸಂವಹನ ನಡೆಸುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Tiger Trap

(ಏಜೆನ್ಸೀಸ್​)

ಕಾರ್ಲ್ ತಾನು PTSD (ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ನಿಂದ ಬಳಲುತ್ತಿದ್ದೇನೆ ಮತ್ತು ವೆಟರನ್ಸ್ ಅಫೇರ್ಸ್ ಇಲಾಖೆಯ ವೈದ್ಯರು ಹುಲಿಗಳಂತಹ ಭಾವನಾತ್ಮಕತೆ ಹೊಂದಿರುವ ಪ್ರಾಣಿಗಳನ್ನು ಸಾಕಲು ಅನುಮತಿ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಂತಿಮವಾಗಿ SWAT ತಂಡವು ಹುಲಿಗಳನ್ನು ಸೆರೆಹಿಡಿದಿದ್ದಾರೆ.

ಮೊದಲೇ ಅವರ ಮನೆಯಲ್ಲಿ ಹುಲಿಗಳಿವೆ ಎಂದು ಈ ಹಿಂದೆ ತಿಳಿದು ಬಂದಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಅವನು ಎಲ್ಲಾ ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾನೆ ಮತ್ತು ಹುಲಿಗಳನ್ನು ಸಾಕಲು ಪರವಾನಗಿ ಹೊಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ತನಿಖಾ ತಂಡವು ಕಾರ್ಲ್ ಮನೆಗೆ ಭೇಟಿ ನೀಡಿದಾಗ ಆತ ನಿರಾಕರಿಸಿರುವುದಾಗಿ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net