

Gautam Adani Emotional;ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ತಮ್ಮ ಕಿರಿಯ ಮಗನ ಮದುವೆಯಲ್ಲಿ ಒಂದು ಕ್ಷಣ ಭಾವುಕರಾದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದೇ ಫೆ.7ರಂದು ಅದಾನಿ ಪುತ್ರ ಜೀತ್ ಅದಾನಿ ವಜ್ರ ಉದ್ಯಮಿ ಜೈಮಿನ್ ಪುತ್ರಿ ದಿವಾ ಜೈಮನ್ ಶಾ ಅವರನ್ನು ವಿವಾಹವಾದರು. ಈ ಮದುವೆ ಕಾರ್ಯಕ್ರಮದಲ್ಲಿ ಗೌತಮ್ ಅದಾನಿ ತಮ್ಮ ಕುಟುಂಬದ ಬಗ್ಗೆ ಮಾತನಾಡುವ ವೇಳೆ ಭಾವುಕರಾಗಿದ್ದಾರೆ. ಇದಕ್ಕೂ ಮುನ್ನ ನಿರ್ಗತಿಕರಿಗೆ 10,000 ಕೋಟಿ ರೂ.ಗಳನ್ನು ದಾನವಾಗಿ ನೀಡಿದರು. ತಮ್ಮ ಮಗನ ಗೆಲುವಿನ ಹಿಂದಿನ ಶಕ್ತಿ ತಮ್ಮ ಪತ್ನಿ ಎಂದು ಹೇಳಿದರು.
''ಪುತ್ರ ಜೀತ್ ಮತ್ತು ದಿವಾ ಸಂಪ್ರದಾಯಕ ಪದ್ದತಿಗಳನ್ನು ಗೌರವಿಸುತ್ತಾ ವಿವಾಹವನ್ನು ಮಾಡಿಕೊಂಡಿದ್ದಾರೆ. ಇದೀಗ ಈ ಕ್ಷಣ ನಮ್ಮೆಲ್ಲರಿಗೂ ವಿಶೇಷವಾಗಿದೆ. ಈ ವಿವಾಹವು ಕೇವಲ ಸಂತೋಷದ ಕ್ಷಣವಲ್ಲ, ಬದಲಾಗಿ ಅಸಂಖ್ಯಾತ ನಿರ್ಗತಿಕರ ಜೀವನವನ್ನು ಸುಧಾರಿಸುವ ಉಪಕ್ರಮಗಳ ಆರಂಭವಾಗಿದೆ. ಜೀತ್ ಮತ್ತು ದಿವಾ ಜವಬ್ದಾರಿ ಸಕರಾತ್ಮಕ ಬದಲಾಣೆ ತರಲಿ ಎಂದು ಹಾರೈಸುತ್ತೇನೆ'' ಎಂದು ಅದಾನಿ ಹೇಳಿದರು.
ಮುಂದುವರೆದು, '' ತಾಯಿ ಮಗುವಿಗೆ ಜನ್ಮ ನೀಡುವುದಲ್ಲದೆ, ತನ್ನ ಮಗುವಿನ ಕನಸುಗಳಿಗಾಗಿ ತನ್ನ ಜೀವನವನ್ನೂ ಮುಡಿಪಾಗಿಡುತ್ತಾಳೆ'' ಎಂದು ತಮ್ಮ ಪತ್ನಿಯ ಬಗ್ಗೆ ಶ್ಲಾಘಿಸಿದರು. ತಮ್ಮ ಮಗನ ಕಡೆ ನೋಡಿ '' ನೀವು ನಿಮ್ಮ ಜೀವನದ ಹೊಸ ಹಂತವನ್ನು ಪ್ರಾರಂಭಿಸುವಾಗ, ನೀವು ಇಡುವ ಪ್ರತಿಯೊಂದು ಹೆಜ್ಜೆಯಯಿಂದೆ ತಾಯಿ ಪ್ರೀತಿ, ತ್ಯಾಗವಿದೆ ಎಂದು ನೆನಪಿಡಿ. ಅವಳು ನಿಮ್ಮ ಶಕ್ತಿ, ನಿಮ್ಮ ಮಾರ್ಗದರ್ಶಕಿ ಮತ್ತು ಸದಾ ಬೆಂಬಲವಾಗಿದ್ದಾಳೆ ಎಂದು ಭಾವುಕರಾಗಿದ್ದಾರೆ.(ಏಜೆನ್ಸೀಸ್)