

ಶೃಂಗೇರಿ: ಜ್ಞಾನಭಾರತೀ ವಿದ್ಯಾಕೇಂದ್ರದಲ್ಲಿ ಗೌರಿಹಬ್ಬದ ಪ್ರಯುಕ್ತ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಹೊಸ ಬಳೆ ತೊಡಿಸುವ ಕಾರ್ಯಕ್ರಮ ಬುಧವಾರ ನಡೆಯಿತು. ವಿದ್ಯಾಕೇಂದ್ರದ ಶಿಕ್ಷಣ ಸಂಯೋಜಕ ಡಾ. ಲಕ್ಷ್ಮೀನರಸಿಂಹ ಪ್ರಸಾದ್ ಮಾತನಾಡಿ, ಪ್ರತಿ ಹಬ್ಬವೂ ನಮಗೆ ಉನ್ನತ ಸಂದೇಶ ನೀಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಗೌರಿಹಬ್ಬ ಶ್ರೇಷ್ಠ. ಮಹಿಳೆಯರು ಗೌರಿಹಬ್ಬಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹಬ್ಬದ ಪ್ರಯುಕ್ತ ಹೊಸಬಳೆ ತೊಡುವುದು ನಮ್ಮ ಶಾಸದ ಅತ್ಯುನ್ನತ ಮೌಲ್ಯ. ಯುವಪೀಳಿಗೆ ಇಂತಹ ಮೌಲ್ಯಗಳನ್ನು ಬೆಳೆಸಬೇಕು. ಸದ್ವಿಚಾರಗಳನ್ನು ಆಚರಣೆ ತಂದಾಗ ಮಾತ್ರ ಸಮಾಜದ ಉನ್ನತೀಕರಣ ಸಾಧ್ಯ ಎಂದರು. ವಿದ್ಯಾರ್ಥಿನಿಯರು ಕೈತುಂಬ ಬಳೆತೊಟ್ಟು ಸಂಭ್ರಮಿಸಿದರು. ಮುಖ್ಯ ಅತಿಥಿಗಳಾದ ವಿದ್ಯಾ ಪ್ರಭಾಕರ್, ಮುಖ್ಯಶಿಕ್ಷಕ ಶಂಕರನಾರಾಯಣ, ಶಿಕ್ಷಕಿಯರಾದ ರಮಾ, ರಾಧಿಕಾ ಇದ್ದರು.