ಆಸಿಡ್ ಎರಚಿ, ನಾಲಿಗೆಯನ್ನು ಕತ್ತರಿಸಿ, ಕಣ್ಣು, ಹಲ್ಲುಗಳನ್ನು ಕಿತ್ತು ಬಾಲಕಿ ಹತ್ಯೆ

baby death
Published on

- ಶೌಚಾಲಯಕ್ಕಾಗಿ ತೋಡಿದ ಗುಂಡಿಯಲ್ಲಿ ತೇಲುತ್ತಿದ್ದ ಮೃತದೇಹ

ರಾಂಚಿ: ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ 7 ವರ್ಷದ ಮಗುವಿನ ಮೇಲೆ ಆಸಿಡ್ ಎರಚಿ, ನಾಲಿಗೆಯನ್ನು ಕತ್ತರಿಸಿ, ಆಕೆಯ ಕಣ್ಣುಗಳನ್ನು ಕಿತ್ತು, ಎಲ್ಲಾ ಹಲ್ಲುಗಳನ್ನು ಕಿತ್ತು ಕೊಲೆ ಮಾಡಲಾಗಿದೆ. ನಂತರ ಆಕೆಯ ಮೃತ ದೇಹವನ್ನು ಶೌಚಾಲಯಕ್ಕಾಗಿ ತೋಡಿದ ಗುಂಡಿಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಘಟನೆಯು ಗರ್ವಾ ಜಿಲ್ಲೆಯ ದಂಡೈ ಪೊಲೀಸ್ ಠಾಣೆ ವ್ಯಾಪ್ತಿಯ ಬೌಲಿಯಾ ಗ್ರಾಮದಲ್ಲಿ ನಡೆದಿದೆ.

ಗುಂಡಿಯಲ್ಲಿ ತೇಲುತ್ತಿದ್ದ ಮೃತದೇಹ: ಅವಧೇಶ್ ಸಾಹ್ ಅವರ ಏಳು ವರ್ಷದ ಮಗಳು ಸಂತನ್ ಕುಮಾರ್ ಎರಡು ದಿನಗಳ ಹಿಂದೆ ಹತ್ತಿರದ ಅಂಗಡಿಗೆ ಹೋಗಿದ್ದಳು, ಆದರೆ ಅವಳು ಮನೆಗೆ ವಾಪಸ್​​ ಬಂದಿರಲಿಲ್ಲ. ಮನೆಯವರು ಹಲವೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಗುರುವಾರದಂದು ಗ್ರಾಮದಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ಅವಧೇಶ್ ಸಾಹ ಅವರ ಸಹೋದರ ಸುರೇಶ್ ಸುರೇಶ್​​​ ಅವರ ಮನೆಯ ಹಿಂದೆ ಶೌಚಾಲಯಕ್ಕಾಗಿ ಅಗೆದಿದ್ದ ಹೊಂಡದಲ್ಲಿ ಸಂತನ ಶವ ತೇಲುತ್ತಿರುವುದನ್ನು ಕಂಡಿದ್ದಾರೆ.ಮಗುವಿನ ಶವ ಪತ್ತೆಯಾದ ತಕ್ಷಣ, ಸ್ಥಳೀಯರು ಪೊಲೀಸರಿ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಈ ಕುರಿತಾಗಿ ಪೊಲೀಸ್​ ಅಧಿಕಾರಿಯೊಬ್ಬರು ಮಾತನಾಡಿ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಯಾವುದೋ ಕೌಟುಂಬಿಕ ದ್ವೇಷದಿಂದ ಈ ಘಟನೆ ನಡೆದಿರಬಹುದು ಅಥವಾ ತಂತ್ರ-ಮಂತ್ರದ ವಿಚಾರವಾಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net