ಗಣೇಶ ಚತುರ್ಥಿ 2025; ಭಕ್ತರು ‘ಗಣಪತಿ ಬಪ್ಪಾ ಮೋರಯಾ’ ಎಂದು ಕೂಗುವುದೇಕೆ? Ganesh Chaturthi

Untitled design
Published on

Ganesh Chaturthi: ಇಂದು (ಆ.27) ಗಣೇಶ ಚತುರ್ಥಿಯನ್ನು ಎಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತದಲ್ಲಿ ಗಣೇಶ ಪೂಜೆಗೆ ವಿಶೇಷ ಪ್ರಾಮುಖ್ಯತೆ ಇದೆ. ಕಳೆದ ಕೆಲವು ವರ್ಷಗಳಿಂದ ಗಣೇಶ ಪೂಜೆಯಲ್ಲಿನ ಉತ್ಸಾಹ ಹೆಚ್ಚಾಗಿದೆ. ಇನ್ನೂ ಈ ಹಬ್ಬದ ಸಂದರ್ಭದಲ್ಲಿ ಗಣಪನಿಗೆ 'ಗಣಪತಿ ಬಪ್ಪಾ ಮೋರಯಾ' ಎಂದು ಕೂಗುವುದು ವಿಶೇಷವಾಗಿದೆ. ಇದು ಗಣೇಶನ ಭಕ್ತಿಯ ಸಂಕೇತವಾಗಿದೆ ಹಾಗಿದ್ರೆ ಈ ಘೋಷವಾಕ್ಯದ ಹಿಂದಿನ ಕಾರಣ ಏನು ಎಂಬುದನ್ನು ತಿಳಿಯೋಣ.

14 ನೇ ಶತಮಾನದಲ್ಲಿ, ಪುಣೆಯ ಚಿಂಚ್‌ವಾಡ್‌ನಲ್ಲಿ ಮೋರ್ಯ ಗೋಸಾವಿ ಎಂಬ ಭಕ್ತನಿದ್ದನು. ಅವರು ಮೂಲತಃ ಕರ್ನಾಟಕದ ಶಾಲಿಗ್ರಾಮದ ನಿವಾಸಿಯಾಗಿದ್ದರು. ಬಳಿಕ ಅವರು ಪುಣೆಯ ಚಿಂಚ್‌ವಾಡ್‌ಗೆ ತೆರಳಿದರು. ತಮ್ಮ ಕೆಲವು ಪಾಪಗಳಿಗೆ ಪಶ್ಚಾತ್ತಾಪಪಟ್ಟು, ಪುಣೆಯಲ್ಲಿ ಗಣೇಶನನ್ನು ಪೂಜಿಸಲು ಪ್ರಾರಂಭಿಸಿದರು. ಒಂದು ದಿನ ಮೋರಯಾ ಮಲಗಿದ್ದಾಗ ಅವನ ಕನಸಿನಲ್ಲಿ ಗಣಪತಿ ಕಾಣಿಸಿಕೊಂಡು ಹತ್ತಿರದ ನದಿಯಲ್ಲಿ ತನ್ನ ವಿಗ್ರಹವಿದೆ ಎಂದು ಹೇಳಿ, ಆ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಲು ಹೇಳಿದನು. ಗಣಪತಿಯು ಕನಸಿನಲ್ಲಿ ಹೇಳಿದ ಮಾತು ನಿಜವೋ ಸುಳ್ಳೋ ಎಂದು ತಕ್ಷಣ ತಿಳಿದುಕೊಳ್ಳಲು ಮೋರಯಾ ನದಿ ಕಡೆ ತೆರಳಿದರು. ಗಣಪತಿ ಕನಸಿನಲ್ಲಿ ಹೇಳಿದಂತೆಯೇ ಮೋರಯಾ ನದಿಯಲ್ಲಿ ಗಣೇಶನ ವಿಗ್ರಹವಿತ್ತು. ನದಿಯಿಂದ ಗಣಪತಿ ಮೂರ್ತಿಯನ್ನು ತಂದು ದೇವಾಲಯವನ್ನು ನಿರ್ಮಿಸಲಾಯ್ತು.

(ಏಜೆನ್ಸೀಸ್)

ಈ ಅಸಾಧಾರಣ ಭಕ್ತಿಯಿಂದ ಪ್ರಭಾವಿತನಾದ ಗಣೇಶನು ಸ್ವತಃ ಅವನಿಗೆ ಕಾಣಿಸಿಕೊಂಡು ವರವನ್ನು ಕೋರಲು ಕೇಳಿದನೆಂದು ಹಲವರು ಹೇಳುತ್ತಾರೆ. ಮೋರಯಾಜಿ ಯಾವಾಗಲೂ ತನ್ನ ಹೆಸರನ್ನು ಗಣೇಶನ ಹೆಸರಿನೊಂದಿಗೆ ಸೇರಿಸಲಿ ಎಂದು ಪ್ರಾರ್ಥಿಸಿದನು. ಅಂದಿನಿಂದ ಮೋರ್ಯ ಗೋಸಾವಿಯ ಹೆಸರು ಗಣಪತಿ ಹಬ್ಬಗಳ ಒಂದು ಭಾಗವಾಗಿದೆ. ಅವರ ಭಕ್ತರು ಗಣೇಶನನ್ನು 'ಗಣಪತಿ ಬಪ್ಪಾ ಮೋರಯಾ' ಎಂಬ ಪದಗಳಿಂದ ಪೂಜಿಸುತ್ತಾರೆ. ಗಣಪತಿ ಬಪ್ಪಾ ಜೊತೆಗೆ, ಮೋರಯಾಜಿಯ ಹೆಸರನ್ನು ಗೌರವಿಸಲು ಜಪಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net