

ನವದೆಹಲಿ: 'ಗಾಂಧಿ ಪರಿವಾರ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಚುನಾವಣಾ ಮುಖ್ಯಸ್ಥ ಮಧುಸೂಧನ್ ಮಿಸ್ತ್ರಿ ಸ್ಪಷ್ಟನೆ ನೀಡಿದ್ದಾರೆ. ಈ ವಿಷಯದಲ್ಲಿ ಗಾಂಧಿ ಪರಿವಾರವೂ ತಟಸ್ಥವಾಗಿದೆ' ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆಯುತ್ತಿರುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜೊತೆ ಶಶಿ ತರೂರ್ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಕಣದಲ್ಲಿ ಏರುಪೇರುಗಳಿವೆ ಎಂದು ಸೂಕ್ಷ್ಮವಾಗಿ ತರೂರ್ ನುಡಿದಿದ್ದಾರೆ.
ಇದೇ ವೇಳೆ ಜಮ್ಮು-ಕಾಶ್ಮೀರದ ನಾಯಕರೊಂದಿಗೆ ಮಾತನಾಡಿದ ಖರ್ಗೆ 'ಈ ಚುನಾವಣೆ ಪಕ್ಷದ ಆಂತರಿಕ ವಿಷಯ. ನಮ್ಮ ನಿಜ ಯುದ್ಧ ಇರುವುದು ಬಿಜೆಪಿ ಮತ್ತು ಆರ್ಎಸ್ಎಸ್ನೊಂದಿಗೆ. ಅವರು ಈ ದೇಶದ ಸಾಮಾಜಿಕ ಹಾಗೂ ಸಾಂವಿಧಾನಿಕ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ' ಎಂದರು.