More

    ಓಲಾ ಆ್ಯಪ್ ಆಧರಿಸಿ ಆಟೋರಿಕ್ಷಾ ಓಡಿಸುತ್ತಿದ್ದ ಚಾಲಕನಿಗೆ ಶಾಕ್ ಕೊಟ್ಟ ಪೊಲೀಸರು!

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಉಬರ್ ಮತ್ತು ಓಲಾ ಆ್ಯಪ್ ಆಧರಿತ ಆಟೋರಿಕ್ಷಾ ಸೇವೆಯ ಮೇಲೆ ಸಾರಿಗೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಸಮರ ಸಾರಿದಂತಿದೆ.

    ಆ್ಯಪ್ ಆಧರಿಸಿ ಆಟೋರಿಕ್ಷಾ ಓಡಿಸುತ್ತಿದ್ದ ಚಾಲಕನೊಬ್ಬನಿಗೆ ಇಂದು ಪೊಲೀಸರು 6 ಸಾವಿರ ರೂ. ದಂಡ ವಿಧಿಸಿದರು. ಇಷ್ಟೊಂದು ದುಬಾರಿ ದಂಡದ ರಸೀದಿ ಕೊಟ್ಟಿದ್ದನ್ನು ನೋಡಿ ಶಾಕ್ ಆದ ಆಟೋ ಚಾಲಕ ಇತರ ಆಟೋ ಚಾಲಕರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ನೂರಾರು ಚಾಲಕರು ಆಟೋ ನಿಲ್ಲಿಸಿ, ದಿಡೀರ್ ಧರಣಿ ನಡೆಸಿದರು. ಅಧಿಕಾರಿಗಳು ಮತ್ತು ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಆಟೋ ಚಾಲಕರ ಮನವೊಲಿಸಿ ಧರಣಿ ಹಿಂತೆಗೆಸಲು ಹರಸಾಹಸ ಪಡಬೇಕಾಯಿತು.

    ಓಲಾ, ಉಬರ್ ಮತ್ತು ರ‌್ಯಾಪಿಡೋ ಆ್ಯಪ್ ಆಧರಿತ ಸೇವೆಗಳಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡಿ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂಬುದು ಅಧಿಕಾರಿಗಳ ವಾದ. ಹಾಗಾಗಿ ಆ ಕಂಪನಿಗಳಿಗೆ ಈಗಾಗಲೇ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೂ ಆ್ಯಪ್ ಆಧರಿತ ಸೇವೆ ಇನ್ನೂ ಬಂದ್ ಆಗಿಲ್ಲ. ನೋಟಿಸ್‌ಗೆ ಆ ಕಂಪನಿಗಳು ಉತ್ತರ ನೀಡಿವೆಯೇ ಇಲ್ಲವೇ ಎಂಬುದೂ ಆಟೋ ಚಾಲಕರಿಗೆ ಗೊತ್ತಿಲ್ಲ. ಸದ್ಯದಲ್ಲೇ ಸರ್ಕಾರ ಮತ್ತು ಕಂಪನಿ ಅಧಿಕಾರಿಗಳ ಸಭೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇಷ್ಟರ ಮಧ್ಯೆಯೇ ಪೊಲೀಸರು ಆಟೋರಿಕ್ಷಾ ಚಾಲಕರ ಮೇಲೆ ದಂಡ ಪ್ರಯೋಗ ಮಾಡಿದ್ದು ಆಟೋ ಚಾಲಕರನ್ನು ಕೆರಳಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts