

ಶೃಂಗೇರಿ: ಪಪಂನ ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿಯಿಂದ 64ನೇ ವರ್ಷದ ಗಣಪತಿಯ ವಿಸರ್ಜನಾ ಮಹೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯಿತು. ಡಾ.ವಿ.ಆರ್.ಗೌರೀಶಂಕರ್ ಸಭಾಂಗಣದಿಂದ ರಾಜಬೀದಿಯಲ್ಲಿ ಸಂಚರಿಸಿದ ಮಹಾಗಣಪತಿಗೆ ಪಪಂನ ಸದ್ಭಕ್ತರು ಹಣ್ಣ-ಹಂಪಲು ಹಾಗೂ ಅರತಿ ಬೆಳಗಿ ಶ್ರದ್ಧಾಭಕ್ತಿ ಮೆರೆದರು.
ಸಂಗೀತಕ್ಕೆ ಮಹಿಳೆಯರು-ಪುರುಷರು ಸಂಭ್ರಮದಿಂದ ಜಡಿಮಳೆ ಲೆಕ್ಕಿಸದೆ ನೃತ್ಯ ಮಾಡಿದರು. ಬಳಿಕ ತುಂಗಾನದಿಯಲ್ಲಿ ಗಣಪತಿ ವಿಸರ್ಜಿಸಲಾಯಿತು. ಸಮಿತಿ ಅಧ್ಯಕ್ಷ ಎಂ.ಎಲ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವೇಣುಗೋಪಾಲ್ ಹಾಗೂ ಪದಾಧಿಕಾರಿಗಳು ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಾರ್ವಜನಿಕ ಗಣೇಶೋತ್ಸವದಲ್ಲಿ ಗಣಹೋಮ, ಏಕನಾರಿಕೇಳ ಮುಂತಾದ ಧಾರ್ಮಿಕ ಕಾರ್ಯಕ್ರಮ, ವೈವಿಧ್ಯಮಯ ನೃತ್ಯಗಳು, ಪೌರಾಣಿಕ ಯಕ್ಷಗಾನ, ಅರ್ಕೆಸ್ಟಾ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ಜನಮೆಚ್ಚುಗೆಗೆ ಪಾತ್ರವಾಯಿತು.