'ಸೋನಾ ಬೇಬಿ' ಜತೆ ಭರ್ಜರಿ ಹೆಜ್ಜೆ ಹಾಕಿದ ಪ್ರಜ್ವಲ್!; ಯಾವ ಸಿನಿಮಾವಿದು?

Untitled design (66)
Published on

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ "ಗಣ" ಸಿನಿಮಾ ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ಹಾಗೂ ಹಾಡಿನ ಮೂಲಕ ಅನೇಕರ ಗಮನವನ್ನು ಸೆಳೆಯುತ್ತಿದ್ದು, ಚಿತ್ರದ ಕಥಾಹಂದರವೇನು? ನಾಯಕಿ ಯಾರು? ಎಂಬ ಹಲವು ಪ್ರಶ್ನೆಗಳು ಸದ್ಯ ಪ್ರೇಕ್ಷಕರನ್ನು ಕಾಡಲಾರಂಭಿಸಿದೆ.

"ಗಣ" ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರಪ್ರಸಾದ್ ಬರೆದಿರುವ "ಮೈ ನೇಮ್ ಇಸ್ ಸೋನಾ ಬೇಬಿ ಬೇಬಿ..ಕಣ್ಣಾಮುಚ್ಚಾಲೆ ನನ್ನ ಹಾಬಿ" ಎಂಬ ಹಾಡು ಸರಿಗಮಪ ಆಡಿಯೋ ಸಂಸ್ಥೆ ಮೂಲಕ ಬಿಡುಗಡೆಯಾಗಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಮಾಸ್ ಐಟಂ ಹಾಡಿಗೆ ಪ್ರಜ್ವಲ್ ದೇವರಾಜ್, ನಮೃತಾ ಮಲ್ಲ ಹಾಗೂ ರವಿಕಾಳೆ ಹೆಜ್ಜೆ ಹಾಕಿದ್ದಾರೆ.

"ಕ್ರಾಂತಿ" ಚಿತ್ರದ ಟೇಕ್ ಇಟ್ ಪುಷ್ಪವತಿ ಹಾಡು ಸೇರಿದಂತೆ ಅನೇಕ ಯಶಸ್ವಿ ಗೀತೆಗಳನ್ನು ಹಾಡಿರುವ ಐಶ್ವರ್ಯ ರಂಗರಾಜನ್ ಚಿತ್ರಕ್ಕೆ ಗಾಯನ ನೀಡಿದ್ದಾರೆ. ಈ ಹಾಡು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಹಲವರಿಂದ ಮೆಚ್ಚುಗೆ ಪಡೆಯುತ್ತಿದೆ. ಶೀಘ್ರವೇ ಸಿನಿಮಾ ತೆರೆಗೆ ಬರಲು ಕೂಡ ಸಜ್ಜಾಗಿದೆ.

ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ, ಸತೀಶ್ .ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರ ತಾರಾಬಳಗವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net