IPL 2024: ಮುಂಬೈ ಇಂಡಿಯನ್ಸ್​ಗೆ ಹಾರಿದ ಪಾಂಡ್ಯ; ಗುಜರಾತ್​ ಟೈಟನ್ಸ್​ ನಾಯಕನಾಗಿ ಶುಭಮನ್ ಗಿಲ್!

Untitled design (65)
Published on

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ಕ್ಕೆ ಸಕಲ ತಯಾರಿಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಆವೃತ್ತಿಗೂ ಮುನ್ನವೇ ಕ್ರಿಕೆಟ್​ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ.

ಸತತ ಎರಡು ವರ್ಷಗಳ ಕಾಲ ಕ್ಯಾಪ್ಟನ್ ಆಗಿ ಗುಜರಾತ್​ ಟೈಟನ್ಸ್ ತಂಡವನ್ನು ಮುನ್ನಡೆಸಿಕೊಂಡು​ ಬಂದಿದ್ದ ಹಾರ್ದಿಕ್​ ಪಾಂಡ್ಯ, ಒಂದು ಬಾರಿ ಐಪಿಎಲ್​ ಟ್ರೋಫಿ, ಒಮ್ಮೆ ರನರ್​ ಅಪ್​ ಸ್ಥಾನವನ್ನು ನಾಯಕನಾಗಿ ತಂದುಕೊಟ್ಟಿದ್ದರು. ಇದೀಗ ತಮ್ಮ ಹಿಂದಿನ ತಂಡ ಮುಂಬೈ ಇಂಡಿಯನ್ಸ್​ಗೆ ವಾಪಾಸ್​ ಆಗಿರುವುದು ಅನೇಕರಲ್ಲಿ ಬೇಸರ ಮೂಡಿಸಿದೆ.

ಒಂದೆಡೆ ಹಾರ್ದಿಕ್​ ಗುಜರಾತ್​ ತಂಡವನ್ನು ಕೈಬಿಟ್ಟರು ಎಂಬ ಬೇಸರ ಕಾಡಿದರೆ, ಮತ್ತೊಂದೆಡೆ ತಮ್ಮ ಹಿಂದಿನ ತಂಡವಾದ ಮುಂಬೈ ಇಂಡಿಯನ್ಸ್​ಗೆ ಮರಳಿರುವುದು ಇದೀಗ ಮುಂಬೈ ತಂಡದ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ. ಹಲವು ದಿನಗಳಿಂದ ಪಾಂಡ್ಯ​ ಗುಜರಾತ್​ ತಂಡದಿಂದ ಹೊರ ನಡೆದಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದೆ.

ಪಾಂಡ್ಯ ಗುಜರಾತ್​ ತಂಡದಿಂದ ಹೊರನಡೆದ ಬೆನ್ನಲ್ಲೇ ನೂತನ ನಾಯಕನಾಗಿ ಟೀಮ್​ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​ ಶುಬ್ಮನ್ ಗಿಲ್‌ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಗುಜರಾತ್ ಟೈಟಾನ್ಸ್ (ಜಿಟಿ) ಖಚಿತಪಡಿಸಿದೆ. ಕ್ಯಾಪ್ಟನ್​ ಸ್ಥಾನಕ್ಕೆ ಕೇನ್ ವಿಲಿಯಮ್ಸನ್ ಮತ್ತು ರಶೀದ್ ಖಾನ್ ಪೈಪೋಟಿಯ ಮಧ್ಯೆ ಗಿಲ್‌ಗೆ ನಾಯಕನ ಪಟ್ಟವನ್ನು ನೀಡಲು ಟೈಟಾನ್ಸ್ ನಿರ್ಧರಿಸಿದೆ. ಕ್ಯಾಪ್ಟನ್​ ಆಗಿ ಶುಭಮನ್​​ ತಮ್ಮ ತಂಡವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು 2024ರ ಆವೃತ್ತಿಯಲ್ಲಿ ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net