ಪಿಎಸ್ಐ ಹಗರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ: ಡಾ.ಜಿ. ಪರಮೇಶ್ವರ್

g parameshwar
Published on

ಬೆಂಗಳೂರು: ಪಿಎಸ್​ಐ ಹಗರಣದ(PSI Scam) ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್(Dr.G Parameshwar), ಈ ಪ್ರಕರಣ ಈಗಲೂ ಕೋರ್ಟ್​​ನಲ್ಲಿದೆ, ಇದರ ಬಗ್ಗೆ ನ್ಯಾಯಾಲಯ ಏನು ಹೇಳಲಿದೆ ಎಂಬುದನ್ನು ನೋಡಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.

"ಪಿಎಸ್ಐ ಹಗರಣದಲ್ಲಿ ಭ್ರಷ್ಟಾಚಾರ(Corruption) ನಡೆದಿದೆ ಎಂಬುದು ಸಾಬೀತಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಕ್ರಮ‌ ತೆಗೆದುಕೊಳ್ಳಬೇಕು. ನ್ಯಾಯಾಲಯ ಏನು ಆದೇಶ ನೀಡಲಿದೆಯೋ ಅದನ್ನು ನಾವು ಅನುಸರಿಸಬೇಕು. ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನೀಡುವ ಬಗ್ಗೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನನಗೆ ತಿಳಿದಿಲ್ಲ. ನಾನು ಅದರ ಬಗ್ಗೆ ನೇರವಾಗಿ ಏನೂ ಹೇಳಲಿಕ್ಕೆ ಸಾಧ್ಯವಿಲ್ಲ. ಅಧಿಕಾರಿಗಳ ಜತೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದು ಹೇಳಿದರು.

ಇನ್ನು ಮತಾಂತರ ಕಾಯ್ದೆ ನಿಷೇಧದ ಬಗ್ಗೆ ನಡೆಯುತ್ತಿರುವ ಗೊಂದಲಗಳ ಬಗ್ಗೆ ಪ್ರಶ್ನಿಸಿದಾಗ, "ಈ ಹಿಂದೆ ಕಾನೂನು ವಿರುದ್ಧದ ಕೆಲವೊಂದು ಮುನ್ನಡೆಗಳು ಇತ್ತು. ಸಾಂವಿಧಾನಿಕವಾಗಿ ಏನು ಇಲ್ಲವೋ ಅದನ್ನ ಸರಿಪಡಿಸುತ್ತೇವೆ. ಸಾಂವಿಧಾನಿಕವಾಗಿ ಏನು ಆಗಬೇಕೋ ಅದರ ಕಡೆ ಹೆಚ್ಚು ಒತ್ತು ನೀಡಲಾಗುತ್ತದೆ. ಈ ಹಿಂದೆಯೂ ಮತಾಂತರ(Conversion Rule) ಇತ್ತು! ಸಾಂವಿಧಾನಿಕವಾಗಿ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತೀವಿ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net