ನನ್ನ ಅದೃಷ್ಟ ಚೆನ್ನಾಗಿರಲಿಲ್ಲ... ಹೀಗಾಗಿ ನನಗೆ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿತು; ಜಿ. ಪರಮೇಶ್ವರ್

DCM Parameshwar
Published on

ತುಮಕೂರು: ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್​ ಕಾರ್ಯಕರ್ತರ ಮುಂದೆ ನೋವಿನ ಮಾತುಗಳನ್ನಾಡಿದ್ದಾರೆ. ಸ್ವಕ್ಷೇತ್ರ ಕೊರಟಗೆರೆಯ ತೋವಿನಕೆರೆಯ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತಾ, 2013 ರಲ್ಲಿ ಒಂದೇ ಒಂದು ಮತದಲ್ಲಿ ಗೆಲ್ಲುತ್ತಿದ್ದರೆ ಈ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ನನ್ನದಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ಕ್ಷೇತ್ರದ ಜನರು ನನ್ನನ್ನು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಆದರೆ ನನ್ನ ಹಣೆಬರಹ ಸರಿ ಇರಲಿಲ್ಲ. ಹಾಗಾಗಿ ನನಗೆ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿತು. ಆದರೆ ನನ್ನ ಕ್ಷೇತ್ರದಲ್ಲಿ ಕೈಲಾದ ಕೆಲಸ ಮಾಡಿದ್ದೇನೆ ಅನ್ನೋ ತೃಪ್ತಿ ನನಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net