ರಿಪೇರಿ ಮಾಡುವಾಗ ಬಾಂಬ್​ ರೀತಿ ಸ್ಫೋಟಗೊಂಡ ಮೊಬೈಲ್​ ಫೋನ್​! ಭಯಾನಕ ವಿಡಿಯೋ ವೈರಲ್​

Mobile
Published on

ಲಖನೌ: ಉತ್ತರ ಪ್ರದೇಶದ ಲಲಿತ್‌ಪುರದ ಮೊಬೈಲ್ ರಿಪೇರಿ ಅಂಗಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್​ ಆಗುತ್ತಿದೆ. ಬಾಂಬ್​ ಮಾದರಿಯಲ್ಲೇ ಮೊಬೈಲ್​ ಒಂದು ಸ್ಫೋಟಗೊಂಡಿದ್ದು, ಅದೃಷ್ಟವಶಾತ್​ ಗ್ರಾಹಕ ಮತ್ತು ಅಂಗಡಿ ಮಾಲೀಕ ಬಚಾವ್​ ಆಗಿದ್ದಾರೆ.

ರಿಪೇರಿಗೆಂದು ಗ್ರಾಹಕನೊಬ್ಬ ಅಂಗಡಿಗೆ ಮೊಬೈಲ್ ತಂದಿದ್ದ. ಈ ವೇಳೆ ಮೊಬೈಲ್ ರಿಪೇರಿ ಮಾಡುವಾಗ ಏಕಾಏಕಿ ಬಾಂಬ್​ನಂತೆ ಮೊಬೈಲ್​ ಸ್ಫೋಟಗೊಂದು ಹೊತ್ತಿ ಉರಿದ ಘಟನೆ ಉತ್ತರ ಪ್ರದೇಶದ ಲಲಿತ್‌ಪುರದ ಪಾಲಿ ಪ್ರದೇಶದಲ್ಲಿ ನಡೆದಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಭದೋಹಿ ವಲ್ಲಾ ಎಂಬ ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. 13 ಸೆಕೆಂಡ್‌ಗಳ ವಿಡಿಯೋದಲ್ಲಿ, ಅಂಗಡಿಯವನು ಫೋನ್‌ನಿಂದ ಬ್ಯಾಟರಿಯನ್ನು ತೆಗೆದುಹಾಕಿದಾಗ ಮೊಬೈಲ್​ ಸ್ಫೋಟಗೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಕೌಂಟರ್‌ನಲ್ಲಿ ನಿಂತಿದ್ದ ಅಂಗಡಿಯ ಮಾಲೀಕ ಮತ್ತು ಗ್ರಾಹಕ ತಕ್ಷಣವೇ ಹಿಂದೆ ಸರಿಯುವ ಮೂಲಕ ಅಪಾಯದಿಂದ ತಪ್ಪಿಸಿಕೊಂಡರು. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ಹಿಂದೆ ಸರಿಯದಿದ್ದರೆ, ಗಂಭೀರ ಗಾಯಗಳಾಗುವ ಸಾಧ್ಯತೆ ಇತ್ತು.

ಮೊಬೈಲ್​ ಸ್ಫೋಟಗೊಂಡ ವಿಷಯ ಗಮನಕ್ಕೆ ಬಂದಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪಾಲಿ ಪೊಲೀಸ್ ಠಾಣೆಯ ಪಟ್ಟಣ ಉಸ್ತುವಾರಿ ಸಿಯಾರಾಮ್ ಸಿಂಗ್ ಪಟೇಲ್ ತಿಳಿಸಿದ್ದಾರೆ. ಈ ವೀಡಿಯೋ ಜನರನ್ನು ದಿಗ್ಭ್ರಮೆಗೊಳಿಸಿದ್ದು, ಇದುವರೆಗೆ ಟ್ವಿಟರ್‌ನಲ್ಲಿ 15,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net