ದತ್ತಪೀಠದಲ್ಲಿ ಹುಣ್ಣಿಮೆ ಪೂಜೆ

dattapeeta
ದತ್ತ ಪೀಠದಲ್ಲಿ ನಡೆದ ಹುಣ್ಣಿಮೆ ಪೂಜೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು. ಸೂರ್ಯನಾರಾಯಣ್, ರಘು ಸಕಲೇಶಪುರ, ಆರ್.ಡಿ.ಮಹೇಂದ್ರ, ಸುಮಂತ್ ನೆಮ್ಮಾರ್ ಇತರರಿದ್ದರು.
Published on

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಗುರುವಾರ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿಂದ ಹುಣ್ಣಿಮೆ ಪೂಜೆ ನೆರವೇರಿಸಲಾಯಿತು. ಐ.ಡಿ ಪೀಠದಲ್ಲಿ ಪೂಜೆ ಹಾಗೂ ಹೋಮ ನಡೆಸಲಾಯಿತು.

ಪೂಜೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾದರು. ಗುಹೆಯಲ್ಲಿ ದತ್ತಪಾದುಕೆ ದರ್ಶನ ಪಡೆದರು. ಅರ್ಚಕರು ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತಾತ್ಕಾಲಿಕ ಹೋಮ ಮಂಟಪದಲ್ಲಿ ನಡೆದ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
ಪೂಜೆ ನಂತರ ಸುದ್ದಿಗಾರರೊಂದಿಗೆ ಶೋಭಾ ಕರಂದ್ಲಾಜೆ ಮಾತನಾಡಿ, ದತ್ತಪೀಠದ ಎಲ್ಲ ಬೇಲಿಗಳಿಂದ ನಾವು ಹೊರಬರಬೇಕು. ಅದು ನಮ್ಮೆಲ್ಲರ ಆಸೆ. ದತ್ತಪೀಠವನ್ನು ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ. ಸಂಕಲ್ಪ ಈಡೇರಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಬಜರಂಗದಳದಿಂದ ದತ್ತಪೀಠದಲ್ಲಿ ಹುಣ್ಣಿಮೆ ಪೂಜೆ ನಿರಂತರವಾಗಿ ನಡೆಯಬೇಕು. ದತ್ತಾತ್ರೇಯರಿಗೆ ತ್ರಿಕಾಲ ಪೂಜೆ ಆಗಬೇಕು. ಅದು ನಮ್ಮೆಲ್ಲರ ಅಪೇಕ್ಷೆ. ದತ್ತಪೀಠದ ದಶಕಗಳ ಹೋರಾಟಕ್ಕೆ ಬಿಜೆಪಿ ಸರ್ಕಾರದಲ್ಲಿ ಜಯ ಸಿಕ್ಕಿದೆ ಎಂದರು.
ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ವಿಎಚ್‌ಪಿ ಮುಖಂಡರಾದ ಸೂರ್ಯನಾರಾಯಣ್, ರಘು ಸಕಲೇಶಪುರ, ಶಶಾಂಕ್ ಹೇರೂರು, ಸಿ.ಡಿ.ಶಿವಕುಮಾರ್, ಆರ್.ಡಿ.ಮಹೇಂದ್ರ, ವ್ಯವಸ್ಥಾಪನಾ ಸಮಿತಿ ಸುಮಂತ್ ನೆಮ್ಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net