ಗ್ರಾಹಕರ ಕೈ ಸುಡುತ್ತಿದೆ ಪೆಟ್ರೋಲ್-ಡೀಸೆಲ್ ದರ ಏರಿಕೆ

petrol bank new
Published on

ಬೆಂಗಳೂರು: ಜಗತ್ತಿನಾದ್ಯಂತ ತೈಲ ಬೇಡಿಕೆ ಕುಸಿದಿದ್ದರೂ ರಾಜ್ಯದಲ್ಲಿ ನಿರಂತರವಾಗಿ ಗ್ರಾಹಕರಿಗೆ ತೈಲ ದರ ಏರಿಕೆ ಬಿಸಿ ತಟ್ಟಿದೆ. ಅಬಕಾರಿ ಸುಂಕ ಹಾಗೂ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಹೆಚ್ಚಳದಿಂದ ಕಳೆದ 16 ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಒಟ್ಟಾರೆ 2 ರೂಪಾಯಿ ಹಾಗೂ ಡೀಸೆಲ್ ಮೇಲೆ 2 ರೂಪಾಯಿ 82 ಪೈಸೆ ಏರಿಕೆಯಾಗಿದೆ. ಜತೆಗೆ, 16 ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 20-30 ಪೈಸೆವರೆಗೆ ಹೆಚ್ಚಳವಾಗುತ್ತಿದೆ.

ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ದರ 28 ಪೈಸೆ ಹಾಗೂ ಡೀಸೆಲ್ ದರ 27 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್‌ಗೆ 85.91 ರೂ ಹಾಗೂ ಡೀಸೆಲ್ 77.73 ರೂ. ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net