'ಲಸಿಕೆ ತೆಗೆದುಕೊಂಡರೆ ಕರೊನಾ ಬರಲ್ವಾ?' ಅಂತ ಕೇಳಿದ್ರೆ, ಅದಿನ್ನೂ ಗ್ಯಾರಂಟಿ ಇಲ್ಲ ಅಂದ್ರಂತೆ!; ಔಷಧ ಕಂಪನಿಯವರೇ ಹಿಂಗಂದ್ರೆ ಹೆಂಗೆ?

Pfizer Corona Vaccine
Published on

ನವದೆಹಲಿ: ಕೊವ್ಯಾಕ್ಸಿನ್​ ಲಸಿಕೆ ತೆಗೆದುಕೊಂಡು ಪ್ರಯೋಗಕ್ಕೆ ಒಡ್ಡಿಕೊಂಡಿರುವ ಹರಿಯಾಣದ ಆರೋಗ್ಯ ಮಂತ್ರಿ ಅನಿಲ್ ವಿಜ್​ ಆ ಬಳಿಕವೂ ಕೋವಿಡ್​-19 ಸೋಂಕಿಗೆ ಒಳಗಾಗಿದ್ದಾರೆ. ಖುದ್ದು ಅವರೇ ಇಂದು ಬೆಳಗ್ಗೆ ಇದನ್ನು ಹೇಳಿಕೊಂಡಿದ್ದು, ಮುಂದೆ ಬರಲಿರುವ ಲಸಿಕೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬುದು ಈಗ ಜನರಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

ಈ ಮಧ್ಯೆ ಔಷಧ ಕಂಪನಿಯೊಂದರ ಮುಖ್ಯಸ್ಥರ ಹೇಳಿಕೆ ಲಸಿಕೆಯ ವಿಶ್ವಾಸಾರ್ಹತೆಯ ಬುಡವನ್ನೇ ಅಲುಗಿಸಿದೆ. ಲಸಿಕೆ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಪ್ರಮುಖ ಕಂಪನಿ ಫೈಜರ್​ ಅಧ್ಯಕ್ಷರೇ ಇಂಥದ್ದೊಂದು ಹೇಳಿಕೆ ನೀಡಿರುವುದು ಈಗ ಅಚ್ಚರಿ ಮೂಡಿಸಿದೆ.

ನಿಮ್ಮ ಕಂಪನಿಯ ಲಸಿಕೆಯನ್ನು ತೆಗೆದುಕೊಂಡರೆ ಕರೊನಾ ಸೋಂಕು ತಗುಲುವುದಿಲ್ಲವೇ ಎಂಬ ಪ್ರಶ್ನೆಗೆ, ಅದರ ಬಗ್ಗೆ ನಾವು ಈಗಲೇ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಫೈಜರ್ ಕಂಪನಿಯ ಚೇರ್ಮನ್​ ಅಲ್ಬರ್ಟ್​ ಬೌರ್ಲ ಪ್ರತಿಕ್ರಿಯಿಸಿದ್ದಾರೆ. ಲಸಿಕೆ ತೆಗೆದುಕೊಂಡ ಮೇಲೂ ಕರೊನಾ ಸೋಂಕು ತಗುಲುತ್ತದೆಯೇ ಎಂಬ ಬಗ್ಗೆ ನಾವಿನ್ನೂ ಹೆಚ್ಚಿನ ಅಧ್ಯಯನ ನಡೆಸಬೇಕಿದೆ. ಸದ್ಯ ನಮಗಿರುವ ಮಾಹಿತಿ ಪ್ರಕಾರ ನಾವು ಆ ಬಗ್ಗೆ ನಿಖರವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net