ಡ್ರಂಕ್ ಅಂಡ್ ಡ್ರೈವ್: ಪೊಲೀಸರ ಮುಂದೆಯೇ ಬೈಕ್​ಗೆ ಬೆಂಕಿ ಹಚ್ಚಿದ ವ್ಯಕ್ತಿ..!

smoke
ಸಾಂದರ್ಭಿಕ ಚಿತ್ರ
Published on

ವಾರಂಗಲ್: ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವೇಳೆ ಕುಡುಕನೊಬ್ಬ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ತೆಲಂಗಾಣದ ವಾರಂಗಲ್​ ಬಳಿ ನಡೆದಿದೆ.

ಇದನ್ನೂ ಓದಿ: ಮಗಳ ಕೂದಲು ಹಿಡಿದು ಎಳೆದಾಡಿ ಚಾಕುವಿನಿಂದ 15 ಬಾರಿ ಇರಿದ ತಂದೆ..

ವಾರಂಗಲ್ ಪ್ರಧಾನ ಅಂಚೆ ಕಚೇರಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಶನಿವಾರ ಸಂಜೆ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್​​ ಮಾಡುತ್ತಿದ್ದರು. ಈ ವೇಳೆ ಶಿವನಗರ ಬಡಾವಣೆಯ ಪುಲಿಸೇರು ಶಿವ ಎಂಬ ವ್ಯಕ್ತಿ ಮದ್ಯ ಸೇವಿಸಿ ಬಂದಿದ್ದು, ಅಧಿಕಾರಿಗಳನ್ನು ಕಂಡು ತನ್ನ ಬೈಕ್​ನಿಂದ ರಸ್ತೆ ದಾಟಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನನ್ನು ಹಿಡಿದು ತಪಾಸಣೆ ನಡೆಸಿದ್ದಾರೆ.

warangal bike fire


ಇದರಿಂದ ಕೋಪಗೊಂಡ ಶಿವ ತನ್ನ ವಾಹನದಲ್ಲಿದ್ದ ಪೆಟ್ರೋಲ್ ಪೈಪ್ ತೆಗೆದು ಬೈಕ್​ಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಪೊಲೀಸರು ಪಕ್ಕದ ಅಂಗಡಿಯಿಂದ ವಾಟರ್ ಕ್ಯಾನ್​ಗಳಲ್ಲಿ ನೀರು ತಂದು ಬೆಂಕಿ ನಂದಿಸಿದ್ದಾರೆ. ಬಳಿಕ ವಾಹನವನ್ನು ವಶಪಡಿಸಿಕೊಂಡು ಅಲ್ಲಿಂದ ಕೆಲವರು ಹೋಗಿದ್ದಾರೆ. ಪೊಲೀಸರು ತನ್ನ ವಾಹನವನ್ನು ತೆಗೆದುಕೊಂಡು ಹೋಗಿದ್ದಕ್ಕೆ ಮತ್ತಷ್ಟು ಕೆರಳಿದ ಆತ ವಾಹನ ಚಲಾಯಿಸಿ ಸಿಕ್ಕಿಬೀಳದ ಕಾರಣ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು, ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ.(ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net