ನಾಳೆಯಿಂದ ಈ ಫೋನುಗಳಲ್ಲಿ ವಾಟ್ಸ್​ಆ್ಯಪ್​ ವರ್ಕ್​ ಆಗಲ್ಲ! ಕಾರಣವೇನು ಗೊತ್ತಾ?

whatsapp
Published on

ಬೆಂಗಳೂರು: 2020 ಇಂದು ಅಂತ್ಯವಾಗಲಿದೆ. ನಾಳೆಯಿಂದ 2021 ಆರಂಭವಾಗಲಿದ್ದು, ಹಲವಾರು ಬದಲಾವಣೆಗಳು ನಮ್ಮ ಜೀವನಕ್ಕೆ ಒಗ್ಗಿಕೊಳ್ಳಲು ಸಿದ್ಧವಾಗಿದೆ. ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕೆಲವೊಂದಿಷ್ಟು ಬದಲಾವಣೆಗಳು 2021ರಲ್ಲಿ ನಮಗೆ ಎದುರಾಗಲಿವೆ. ಅದರಂತೆ ವಾಟ್ಸ್​ಆ್ಯಪ್​ ಕೂಡ ಬದಲಾಗ ಹೊರಟಿದ್ದು, ಕೆಲವೊಂದಿಷ್ಟು ಮೊಬೈಲ್​ಗಳಿಗೆ ಸಂಪರ್ಕ ತೆಗೆದುಹಾಕುವುದಾಗಿ ಹೇಳಿಕೊಂಡಿದೆ.

2021ರಲ್ಲಿ ನೂತನ ಫೀಚರ್​ಗಳನ್ನು ಅಳವಡಿಸಿಕೊಳ್ಳಲು ವಾಟ್ಸ್​ಆ್ಯಪ್​ ಸಿದ್ಧತೆ ನಡೆಸಿದೆ. ಅದು ತರಲಿರುವ ಫೀಚರ್​ಗಳು ಕೆಲವು ಹಳೆ ಮೊಬೈಲ್​ಗಳ ಹಾರ್ಡ್​ವೇರ್​ ಮತ್ತು ಸಾಫ್ಟ್​ವೇರ್​ಗೆ ಸಪೋರ್ಟ್​ ಆಗುವುದಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಐಒಎಸ್​ 9 ಗಿಂತ ಹಳೆಯ ಸಾಫ್ಟ್​ವೇರ್​ ಹೊಂದಿರುವ ಫೋನ್​ಗಳು ಮತ್ತು ಆ್ಯಂಡ್ರಾಯ್ಡ್​ 4.0.3ಗಿಂತ ಹಳೆಯ ಆ್ಯಂಡ್ರಾಯ್ಡ್​ ಸಾಫ್ಟ್​ವೇರ್​ ಹೊಂದಿರುವ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಅದರಂತೆ ಜನವರಿ 1ರಿಂದ ಈ ಫೋನಗಳಲ್ಲಿ ವಾಟ್ಸ್​ಆ್ಯಪ್​ ಸೇವೆ ಸ್ಥಗಿತವಾಗಲಿದೆ ಎನ್ನಲಾಗಿದೆ.

ಹಳೆ ಫೋನುಗಳಲ್ಲಿ ವಾಟ್ಸ್​ಆ್ಯಪ್​ ಸೇವೆ ಸ್ಥಗಿತಗೊಳಿಸುವುದು ಸಂಸ್ಥೆಯ ಹೊಸ ನಿರ್ಧಾರವೇನಲ್ಲ. ಈ ಹಿಂದೆಯೇ ಸಂಸ್ಥೆ ಈ ಬಗ್ಗೆ ಸೂಚನೆ ನೀಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net