ದುಷ್ಟಶಕ್ತಿ ಕಾಟದಿಂದ ಸಾವಿನ ಮನೆಯವರೆಗಿನ ಆಕೆಯ ಪಯಣದ ಹಾದಿ ಹೀಗಿತ್ತು ನೋಡಿ....!

Evil spirit
Published on

ಹೈದರಾಬಾದ್: ಅನಾರೋಗ್ಯಕ್ಕೊಳಗಾದ ಮಹಿಳೆಯೋರ್ವಳಿಗೆ ದುಷ್ಟಶಕ್ತಿ ಬೆನ್ನಟ್ಟಿದೆ ಎಂದು ಸಂಶಯಿಸಿ ಅದರಿಂದ ಮುಕ್ತಿಗೊಳಿಸಲು ನೀಡಿದ 'ಚಿಕಿತ್ಸೆ' ಆಕೆಯ ಬದುಕನ್ನೇ ಶಾಶ್ವತವಾಗಿ ಮುಗಿಸಿಬಿಟ್ಟಿದೆ...

ಮಂತ್ರವಾದಿಯೊಬ್ಬ ದುಷ್ಟಶಕ್ತಿಯಿಂದ ಮುಕ್ತಗೊಳಿಸಲು ಮಹಿಳೆಗೆ ಕ್ರೂರವಾಗಿ ಹಿಂಸಿಸಿದ್ದು, ಮಹಿಳೆ ಸೋಮವಾರ ಸಾವಿಗೀಡಾಗಿದ್ದಾಳೆ.

ಜೈಪುರ ಮಂಡಲದ ನಿವಾಸಿಯಾಗಿದ್ದ ರಜಿತಾ ಸಾವಿಗೀಡಾದ ನತದೃಷ್ಟೆ. ಒಂದೂವರೆ ವರ್ಷಗಳ ಹಿಂದೆ ರಜಿತಾ- ಮಲ್ಲೇಶ್ ವಿವಾಹವಾಗಿದ್ದರು. ರಜಿತಾಳ ಪೋಷಕರು ತೀರಿಕೊಂಡಿದ್ದು ಆಕೆಯ ಪತಿ ಜೈಪುರದಲ್ಲಿ ರಜಿತಾ ಮತ್ತು ಆಕೆಯ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದ. ನಾಲ್ಕು ತಿಂಗಳ ಹಿಂದೆ ಅವರಿಗೆ ಮಗು ಜನಿಸಿದೆ. ನಂತರ ಅನಾರೋಗ್ಯಕ್ಕೊಳಗಾಗಿದ್ದ ಆಕೆಗೆ ದುಷ್ಠ ಶಕ್ತಿ ಕಾಡುತ್ತಿದೆ ಎಂದು ಆಕೆಯ ಕುಟುಂಬದವರು ಸಂಶಯಿಸಿದ್ದರು. ಅವಳನ್ನು ಗುಣಮುಖಗೊಳಿಸಲು ಮಂತ್ರವಾದಿ ಶ್ಯಾಮ್‌ನನ್ನು ಆಕೆಯ ಕುಟುಂಬದವರು ಕರೆಸಿದ್ದರು.

ಆರೋಪಿ ದುಷ್ಟಶಕ್ತಿಯಿಂದ ಆಕೆಯನ್ನು ಮುಕ್ತಗೊಳಿಸಲು ಇನ್ನಿಲ್ಲದಂತೆ ಹಿಂಸೆ ನೀಡಿದ್ದ. ತೀವ್ರವಾಗಿ ಹೊಡೆಯಲಾರಂಭಿಸಿದ್ದ. ಕೂದಲಿನಿಂದ ಎಳೆದಾಡಿದ ಮತ್ತು ಹಾಸಿಗೆಯ ಮೇಲೆ ತಳ್ಳಾಡಿದ್ದ.. ಇದೆಲ್ಲದಕ್ಕೂ ಆಕೆಯ ಕುಟುಂಬದವರು ಮೂಕ ಪ್ರೇಕ್ಷಕರಾಗಿದ್ದರು. ರಜಿತಾಳ ಆರೋಗ್ಯ ತೀವ್ರ ಹದಗೆಡಲಾರಂಭಿಸಿದಾಗ, ಆಕೆಯನ್ನು ಕರೀಂನಗರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸಾವಿಗೀಡಾಗಿದ್ದಾಳೆ.

ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ಬಹಿರಂಗಗೊಳ್ಳುತ್ತದೆ. ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ನಾವು ಈಗಾಗಲೇ ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net