ಕೆಲವರು ಈಗ ರಾಮನಾಮ ಪಠಿಸುತ್ತಿದ್ದಾರೆ...: ಪ್ರಿಯಾಂಕಾ ಗಾಂಧಿಗೆ ಯೋಗಿ ತಿರುಗೇಟು

Yogi
Published on

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆ ಭೂಮಿ ಪೂಜೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಕೆಲವರು ರಾಮನಾಮ ಪಠಿಸುತ್ತಿದ್ದಾರೆ. ಆದರೆ ಅವರು ಈ ಹಿಂದೆ ರಾಮಲಲ್ಲಾ ವಿಗ್ರಹವನ್ನು ಅಯೋಧ್ಯೆಯಿಂದ ತೆಗೆಯಬೇಕು ಎಂದು ಒತ್ತಾಯ ಮಾಡಿದ್ದರು.

ಕಾಂಗ್ರೆಸ್​ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಅವರು ರಾಮಮಂದಿರ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಯೋಗಿ ಆದಿತ್ಯನಾಥ್​ ಅವರು ಹೀಗೆ ಉತ್ತರಿಸಿದ್ದಾರೆ.

ಮೊದಲು ಈ ಬೆಂಬಲ ಇರಲಿಲ್ಲ. ಅವರೆಲ್ಲ ರಾಮಲಲ್ಲಾ ವಿಗ್ರಹ ಈಗಿರುವ ಜಾಗದಿಂದ 200 ಮೀ.ದೂರದಲ್ಲಿ ಶಿಲಾನ್ಯಾಸ ಮಾಡಬೇಕು ಎಂದು ಬಯಸಿದವರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ಪ್ರಮುಖ ನಾಯಕರಿಗೆ ಆಹ್ವಾನ ನೀಡದೆ ಇರುವ ಬಗ್ಗೆ ಉತ್ತರಿಸಿದ ಯೋಗಿ, ನಾವು ಎಲ್ಲರಿಗೂ ಆಮಂತ್ರಣ ನೀಡಬೇಕು ಎಂದು ಬಯಸಿದ್ದೆವು. ಆದರೆ ದೇಶದಲ್ಲಿ ಕರೊನಾ ವೈರಸ್​ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಕೇವಲ 200 ಜನರನ್ನು ಮಾತ್ರ ಆಹ್ವಾನಿಸಿದ್ದೆವು. ಬಿಜೆಪಿ ನಾಯಕರಿಗೆ ಅನೇಕರನ್ನು ಆಮಂತ್ರಿಸಿಲ್ಲ. ಅಷ್ಟೇ ಏಕೆ, ರಾಷ್ಟ್ರಪತಿಯವರೂ ಸಮಾರಂಭದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರ ಶಿಲಾನ್ಯಾಸಕ್ಕೆ ಕ್ರೀಡಾತಾರೆಯರ ಸಂಭ್ರಮ

ಪ್ರಭು ಶ್ರೀರಾಮಚಂದ್ರ ಎಲ್ಲರಿಗೆ ಸೇರಿದವನು. ಅವನ ಹೆಸರು ಹೇಳಿ ಸಮಾಜವನ್ನು ಒಡೆಯುವ ಕೆಲಸಕ್ಕೆ ಯಾರೂ ಪ್ರಯತ್ನ ಮಾಡಬಾರದು. ಶ್ರೀರಾಮನ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಇಚ್ಛೆ ನಮ್ಮದು ಎಂದರು.

ಶ್ರೀರಾಮನನ್ನು ಕೆಲವರು ಸಂಕುಚಿತ ಮನೋಭಾವದಿಂದ ನೋಡುತ್ತಿದ್ದಾರೆ. ಅವರೆಲ್ಲ ಚುನಾವಣೆ ಹೊತ್ತಿಗೆ, ಹಿಂದೂ ಮತಗಳಿಗಾಗಿ ಮಾತ್ರ ದೇವಸ್ಥಾನಕ್ಕೆ ಬರುತ್ತಾರೆ ಎಂದೂ ಕಾಂಗ್ರೆಸ್​ಗೆ ಟಾಂಗ್​ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net