

ಕಡು ಬಡತನದಲ್ಲಿ ಹುಟ್ಟಿದ ನನಗೆ ಕಾಲೇಜು ಪರೀಕ್ಷೆ ಶುಲ್ಕ ಕಟ್ಟಲು ಆಗಲಿಲ್ಲ. ವ್ಯಾಸಂಗದಿಂದ ದೂರ ಉಳಿದು ಏನಾದರೂ ಕೆಲಸ ಮಾಡಿ ಜೀವನ ಸಾಗಿಸೋಣವೆನ್ನುವ ಭಾವನೆ ಒಂದೆಡೆಯಾದರೆ ಶಿಕ್ಷಣ ಒಲವು ಮತ್ತೊಂದೆಡೆ. ಆಗ ನನ್ನ ಕೈಹಿಡಿದವ ಎ.ಧನಂಜಯ. ಅವನ ಮನೆಯ ಆರ್ಥಿಕ ಸ್ಥಿತಿಯೇ ಅಷ್ಟೊಂದು ಚೆನ್ನಾಗಿ ಇಲ್ಲದಿದ್ದರೂ, ನಿನ್ನ ಶಿಕ್ಷಣ ವೆಚ್ಚ ನಾನು ಭರಿಸುವೆ ನೀನು ಓದು ಎಂದು ಧೈರ್ಯ ತುಂಬಿದ್ದ. ನಿನ್ನ ಓದನ್ನೇ ನನ್ನ ಓದು ಎಂದುಕೊಳ್ಳುವೆ ನೀನು ನಿಷ್ಠೆ ಪ್ರಾಮಾಣಿಕತೆಯಿಂದ ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಆಸೆ ನನ್ನದು ಎಂದು ಶುಲ್ಕ ಭರ್ತಿ ಮಾಡಿದ್ದ. ಇಂದು ನಾನು ಸರ್ಕಾರಿ ಉದ್ಯೋಗದಲ್ಲಿರುವುದಕ್ಕೆ ನನ್ನ ಗೆಳೆಯನೇ ಕಾರಣ.
| ಎ.ಜಿ.ಸುರೇಂದ್ರಬಾಬು ಸಹಾಯಕ ಕಾರ್ಯದರ್ಶಿ, ಎಪಿಎಂಸಿ, ಹೊಳಲ್ಕೆರೆ