

ನಾನು ಮತ್ತು ಜಯಶ್ರೀ 5ನೇ ಕ್ಲಾಸ್ನಿಂದಲೇ ಸ್ನೇಹಿತೆಯರು. ಪಿಯುಸಿ ಮುಗಿದ ನಂತರ ಧಾರವಾಡದಲ್ಲಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಅರ್ಜಿ ಹಾಕೋಣ ಎಂದು ಹೇಳಿದವಳು ಜಯಶ್ರೀ. ನನಗೆ ಧಾರವಾಡಕ್ಕೆ ಹೋಗಿ ಅರ್ಜಿ ತರುವ ಆರ್ಥಿಕ ಪರಿಸ್ಥಿತಿ ಇರಲಿಲ್ಲ. ಜಯಶ್ರೀನೇ ಅವರ ಭಾವನವರ ಮೂಲಕ ತರಿಸಿ ಕೊಟ್ಟಳು. ತುಂಬಿದ ಅರ್ಜಿಯನ್ನು ಕೊಟ್ಟು ಬರಲು ಕೂಡ ಈಕೆಯೇ ನೆರವಾದಳು. ಇಬ್ಬರೂ ತರಬೇತಿಗೆ ಆಯ್ಕೆಯಾಗಿ ಶಿಕ್ಷಕರಾಗಿ ನೇಮಕವಾದೆವು. ಅಂದು ತಾನು ಅರ್ಜಿ ಹಾಕುವಾಗ ಜಯಶ್ರೀ ನೆರವಾಗದಿದ್ದರೆ ನಾನು ಎಲ್ಲಿರುತ್ತಿದ್ದೇನೋ ಗೊತ್ತಿಲ್ಲ. ನನ್ನನ್ನು ಶಿಕ್ಷಕಿಯನ್ನಾಗಿ ಮಾಡಿ ನನ್ನ ಜೀವನದ ದಿಕ್ಕು ಬದಲಿಸಿದಾಕೆ ಈಕೆ.
| ಪ್ರಭಾವತಿ ಎಸ್ ವೈ ಶಿಕ್ಷಕಿ. ಬೆಳಗಾವಿ