ಪತಿ ಸೇರಿ 50 ಪುರುಷರಿಂದ ಅತ್ಯಾಚಾರ; ಕೋರ್ಟ್​​ನಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಮಹಿಳೆ..

Untitled-design-69
Published on

ಪ್ಯಾರಿಸ್​​​: ಸುಮಾರು ಒಂದು ದಶಕದ ಕಾಲ ಮತ್ತು ಬರುವ ವಸ್ತು ನೀಡಿ ತನ್ನ ಪತಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಆ ಸಮಯದಲ್ಲಿ ಬೇರೆ ಪುರುಷರನ್ನು ಮನೆಗೆ ಕರೆಸಿ ನನ್ನನ್ನು ಅತ್ಯಾಚಾರ ಮಾಡುವಂತೆ ಆಹ್ವಾನಿಸಿದ ಎಂದು ಫ್ರೆಂಚ್ ಮಹಿಳೆಯೊಬ್ಬರು ತಮಗಾದ ಅನ್ಯಾಯವನ್ನು ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದಾರೆ.

ಅವರೆಲ್ಲರೂ ನನ್ನನ್ನು ಕಸದ ಬುಟ್ಟಿಯಂತೆ ಬಳಸಿಕೊಂಡರು. ನನಗೆ ನನ್ನ ಅಸ್ತಿತ್ವವೆ ಇಲ್ಲದಂತಾಗಿದೆ. ನಾನು ಜೀವಂತವಾಗಿರುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಅಲ್ಲದೆ ತನ್ನ ಪತಿ ಆ ಕ್ರೂರ ಸಮಯದಲ್ಲಿ ವಿಡಿಯೋಗಳನ್ನು ಮತ್ತು ಪೋಟೋಗಳನ್ನು ತೆಗೆದಿದ್ದಾನೆ ಎಂದು 72 ವರ್ಷದ ಸಂತ್ರಸ್ತ ಮಹಿಳೆ ಗಿಸೆಲ್ ತಮ್ಮ ನೋವನ್ನು ನ್ಯಾಯಾಲಯದಲ್ಲಿ ವಿವರಿಸಿದ್ದಾರೆ.

ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮಹಿಳೆಯ ಪತಿಯನ್ನು 71 ವರ್ಷದ ಡೊಮಿನಿಕ್ ಪೆಲ್ಲಿಕೋಟ್ ಎಂದು ಗುರುತಿಸಲಾಗಿದೆ. ಡೊಮಿನಿಕ್ ಪೆಲ್ಲಿಕೋಟ್ ಮನೆಯನ್ನು ಶೋಧಿಸಿ ಆತನ ಕಂಪ್ಯೂಟರ್​​ನಿಂದ ಪೊಲೀಸರು ಸಾವಿರಾರು ಫೋಟೋಗಳನ್ನು ಮತ್ತು ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲದರಲ್ಲೂ ಬೇರೆ ಬೇರೆ ವ್ಯಕ್ತಿಗಳು ಆತನ ಪತ್ನಿಯ ಮೇಲೆ ಅತ್ಯಾಚಾರವೆಸಗಿರುವುದಕ್ಕೆ ಪುರಾವೆಗಳಾಗಿವೆ.

ಎಲ್ಲವೂ ಮುಗಿದೆ ಹೋಯಿತು ಎಂದುಕೊಂಡಿದ್ದೆ. ತನ್ನ ಜೀವಕ್ಕೆ ಅಪಾಯವಿದೆ ಎಂದರೂ ಯಾರು ಅದರ ಬಗ್ಗೆ ಒಂದು ಕ್ಷಣವೂ ಆಲೋಚಿಸಲಿಲ್ಲ. ಈ ಅವಧಿಯಲ್ಲಿ ಹೆಚ್​ಐವಿಗೆ ತುತ್ತಾಗುವ ಅಪಾಯವಿದ್ದರೂ ಯಾರೂ ಕರುಣೆ ತೋರಲಿಲ್ಲ. ನವೆಂಬರ್ 2020ರಲ್ಲಿ ಪೊಲೀಸರು ತನ್ನ ಪತಿ ಸೆರೆಹಿಡಿದಿದ್ದ ಒಂದು ದಶಕದ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನು ಮೊದಲ ಬಾರಿಗೆ ತೋರಿಸಿದಾಗ ಪ್ರಜ್ಞಾಹೀನತೆಯ ಹಂತಕ್ಕೆ ತಲುಪಿದೆ. ನನ್ನ ಪ್ರಪಂಚವೇ ಕುಸಿದಂತಾಯಿತು ಎಂದು ಮಹಿಳೆಯು ಕೋರ್ಟ್​​ಗೆ ತಿಳಿಸಿದ್ದಾರೆ. ಇದೆಲ್ಲ ಸಂಗತಿಯನ್ನು ಗಿಸೆಲ್ ನ್ಯಾಯಾಲಯಕ್ಕೆ ತಿಳಿಸುತ್ತಿದ್ದರೆ, ಆಕೆಯ ಪತಿ ತಲೆ ತಗ್ಗಿಸಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ. ಸಂತ್ರಸ್ತೆ 2011 ರಿಂದ 2020ರವರೆಗೆ ಈ ಹಿಂಸೆಗೆ ಒಳಗಾಗಿದ್ದರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಆರೋಪಿ ಪತಿಯು ತನ್ನ ಪತ್ನಿಗೆ ಆಹಾರದಲ್ಲಿ ಅಥವಾ ವೈನ್‌ನಲ್ಲಿ ನಿದ್ರೆ ಮಾತ್ರೆಗಳನ್ನು ನೀಡುತ್ತಿದ್ದ. ಇದಾದ ನಂತರ ಆನ್‌ಲೈನ್ ಚಾಟಿಂಗ್ ಮೂಲಕ ಜನರನ್ನು ಸಂಪರ್ಕಿಸಿ ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಮಾಡಲು ಈ ಜನರನ್ನು ಆಹ್ವಾನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ತನ್ನ ಮೊದಲ ಹೆಸರಿನಿಂದ ಉಲ್ಲೇಖಿಸಲ್ಪಟ್ಟ ಗಿಸೆಲ್ ಪೆಲಿಕಾಟ್ ತನ್ನ ಮೂವರು ವಯಸ್ಕ ಮಕ್ಕಳ ಬೆಂಬಲದೊಂದಿಗೆ ವಿಚಾರಣೆಯನ್ನು ಸಾರ್ವಜನಿಕವಾಗಿ ನಡೆಸಲು ಕೇಳಿದ್ದಾರೆ. ಈ ರೀತಿ ಬಲಿಪಶುಗಳಾದ ಎಲ್ಲಾ ಮಹಿಳೆಯರಿಗೆ ನನ್ನ ನಡೆ ಉದಾಹರಣೆಯಾಗಬೇಕು. ಯಾವುದೇ ಮಹಿಳೆ ಇದನ್ನು ಅನುಭವಿಸಬಾರದು ಎಂದು ಅವರು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.

ಸುಮಾರು 20,000 ಫೋಟೋಗಳು, 100 ಅತ್ಯಾಚಾರ ವಿಡಿಯೋಗಳು ಸಿಕ್ಕಿವೆ. ಪ್ರಕರಣದಕ್ಕೆ ಸಂಬಂಧಿಸಿದಂತೆ ಡೊಮಿನಿಕ್ ಪೆಲ್ಲಿಕಾಟ್ ಮತ್ತು 26 ರಿಂದ 74 ವರ್ಷದೊಳಗಿನ 50 ಪುರುಷರು ವಿಚಾರಣೆ ಎದುರಿಸುತ್ತಿದ್ದಾರೆ. ಆಕೆಯ ಪತಿ ಮತ್ತು ಇತರ 14 ಆರೋಪಿಗಳು ಅತ್ಯಾಚಾರ ಆರೋಪಕ್ಕೆ ತಪ್ಪೊಪ್ಪಿಕೊಂಡಿದ್ದಾರೆ. ಆದರೆ 35 ಪುರುಷರು ಈ ಆರೋಪವನ್ನು ನಿರಾಕರಿಸಿದ್ದು, ಮಹಿಳೆಯು ತನ್ನ ಸ್ವಇಚ್ಛೆಯಿಂದಲೇ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. (ಎಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net