ಕುಡಿದ ನಶೆಯಲ್ಲಿ ಪ್ರಯಾಣಿಕನ ಕಿರಿಕ್​; ವಿಮಾನದಲ್ಲಿ ಮುಂದೇನಾಯ್ತು ನೀವೇ ನೋಡಿ

Untitled-design-66
Published on

ವಾಷಿಂಗ್ಟನ್​ ಡಿಸಿ: ಹಾರಾಟದಲ್ಲಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಾಡಿದ ಗಲಾಟೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಲಂಡನ್​​​ನ ಗ್ಯಾಟ್ವಿಕ್​ ವಿಮಾನ ನಿಲ್ದಾಣದಿಂದ ಗ್ರೀಸ್​ನ ಕಾಸ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ easyjet ವಿಮಾನದಲ್ಲಿ ಘಟನೆ ನಡೆದಿರುವುದಾಗಿ ನ್ಯೂಯಾರ್ಕ್​ ಪೋಸ್​​​ ವರದಿ ಮಾಡಿದೆ. ಮದ್ಯದ ಅಮಲಿನಲ್ಲಿ ಪ್ರಯಾಣಿಕರೊಬ್ಬರ ಗಲಾಟೆ ಆರಂಭಿಸಿ ಮ್ಯೂನಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಮಾಡುವಂತೆ ಒತ್ತಾಯಿಸಿದರು ಎನ್ನಲಾಗಿದೆ.

ವಿಮಾನ ನಿಲ್ದಾಣದಿಂದ ಟೇಕಾಫ್​ ಆದ U28235 ವಿಮಾನ ಎರಡು ಗಂಟೆಗಳ ಬಳಿಕ 30 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದಾಗ ಗಲಾಟೆ ಮಾಡಲು ಆರಂಭಿಸಿ ಬಳಿಕ ಎದ್ದುನಿಂತು ಕ್ಯಾಪ್ಟ್​ನ್​ನ್ನು ನಿಂದಿಸುತ್ತಾ ಅವರ ಕೆಲಸಕ್ಕೆ ಅಡ್ಡಿಯುನ್ನುಂಟು ಮಾಡಿದ್ದಾರೆ. ಬಳಿಕ ಪ್ರಯಾಣಿಕರ ಈ ದುವರ್ತನೆಯಿಂದಾಗಿ ಫ್ಲೈಟ್​ ಅನ್ನು ಲ್ಯಾಂಡಿಂಗ್​ ಮಾಡಲಾಗಿದೆ. ಆರೋಪಿಯನ್ನು ಜರ್ಮನ್ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ವಿಮಾನದಲ್ಲಿದ್ದ ಇತರೆ ಪ್ರಯಾಣಿಕರು ನೆಮ್ಮದಿ ನಿಟ್ಟುಸಿರು ಬಿಟ್ಟಿರು. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ವಿಡಿಯೋದಲ್ಲಿ ಆರೋಪಿಯನ್ನು ಬಂಧಿಸಿದ ಬಳಿಕ ಮತ್ತೊಬ್ಬ ಪ್ರಯಾಣಿಕರು ಖುಷಿಯಿಂದ ಜೋರಾಗಿ ಪ್ರತಿಕ್ರಿಯಿಸಿರುವುದನ್ನು ಕಾಣಬಹುದಾಗಿದೆ.ನೀನು ಸೋತಿರುವೆ ದೂರ ಹೋಗು ಎಂದು ಆರೋಪಿಗೆ ಹೇಳುತ್ತಿದ್ದಾರೆ. ಇತರೆ ಪ್ರಯಾಣಿಕರು ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದಾಗಿದೆ. ಕ್ಯಾಪ್ಟನ್​ ಗದ್ದಲ ಸೃಷ್ಟಿಸಿದ್ದ ವ್ಯಕ್ತಿಯನ್ನು ಹಿಡಿದಿಟ್ಟುಕೊಂಡು ಪೊಲೀಸರು ವಶಕ್ಕೆ ನೀಡಿದಕ್ಕಾಗಿ ಪ್ರಯಾಣಿಕರು ಅವರಿಗೆ ಅಭಿನಂದಿಸಿದ್ದಾರೆ.

ಈ ಬಗ್ಗೆ ಏರ್​ಲೈನ್ ಪ್ರತಿಕ್ರಿಯಿಸಿದ್ದು,​​​​​​ ಪ್ರಯಾಣಿಕರೊಬ್ಬರು ದುವರ್ತನೆಯಿಂದ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಮಾತಿನ ಚಕಮಕಿಯಿಂದ ಆರಂಭವಾಗಿ ಗಲಾಟೆ ಮಾಡಿದ್ದಾಗಿ ಔಟ್ಲೆಟ್​​ ವರದಿ ಮಾಡಿದೆ. ಅಲ್ಲದೆ ಆನ್​ಬೋರ್ಡ್​ ಇಂಟರ್​ಕಾಮ್​​ ಅನ್ನು ಮುರಿದು ವಿಮಾನ ಸಿಬ್ಬಂದಿಯೊಂದಿಗೆ ಜಗಳವಾಡಿ ಅವರ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಅವರನ್ನು ಬಂಧಿಲಾಗಿದೆ ಎಂದು ಹೇಳಿದೆ. ಆದರೆ ಏರ್‌ಲೈನ್ ಆರೋಪಿಯ ಗುರುತನ್ನು ಬಹಿರಂಗಗೊಳಿಸಿಲ್ಲ.

ಈ ರೀತಿಯ ಘಟನೆ ಇದೇ ಮೊದಲನೆಲ್ಲಾ, ಪದೇಪದೆ ಪುನರಾವರ್ತನೆಯಾಗುತ್ತಿರುತ್ತದೆ. ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಜಗಳ ಮಾಡಿ ಜೀವಬೆದರಿಕ ನೀಡಿದ್ದ ಅಮೆರಿಕದ ವ್ಯಕ್ತಿಯೊಬ್ಬನನ್ನು ಆಗಸ್ಟ್​ನಲ್ಲಿ ಬಂಧಿಸಲಾಗಿದೆ. ಜುಲೈ 18ರಂದು ಸಿಯಾಟಲ್‌ನಿಂದ ಡಲ್ಲಾಸ್‌ಗೆ 2101 ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಎರಿಕ್ ನಿಕೋಲಸ್(26) ಎಂಬಾತನನ್ನು ಆತನ ಅಸ್ತಿನನ ವರ್ತನೆಯಿಂದಾಗಿ ಪೊಲೀಸರು ಬಂಧಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net