ರೈಲ್ವೆ ಅಧಿಕಾರಿ ಎಂದು ಹೇಳಿಕೊಂಡು ಲಕ್ಷ ಲಕ್ಷ ವಂಚನೆ: ಆರೋಪಿ ಬಂಧನ|Noida

Noida
Published on

Noida: ಸರ್ಕಾರಿ ಉದ್ಯೋಗ ನೀಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ 49 ವರ್ಷದ ವ್ಯಕ್ತಿಯನ್ನು ನೋಯ್ಡಾ ಪೊಲೀಸರು ಸೋಮವಾರ (ಏ.28) ಬಂಧಿಸಿದ್ದಾರೆ.

ನೋಯ್ಡಾದ ಮೀರತ್ ನಿವಾಸಿ ಜ್ಞಾನೇಂದ್ರ ಸಿಂಗ್ ನೀಡಿದ ದೂರಿನ ಮೇರೆಗೆ, ಪಿಸ್ತೂಲಿಗೆ ಲೈಸೆನ್ಸ್​​ ಮತ್ತು ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 1.71 ಲಕ್ಷ ರೂ. ವಂಚಿಸಿದ ಆರೋಪದ ಮೇಲೆ ಪ್ರಶಾಂತ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಪ್ರಶಾಂತ್ ಕುಮಾರ್, ನವೆಂಬರ್ 2024ರಲ್ಲಿ ಸಿಂಗ್ ಅವರ ಬಿಪಿಒ ಸ್ಥಳದಲ್ಲಿ ಅವರನ್ನು ಭೇಟಿ ಮಾಡಿದನು, ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಪರೀಕ್ಷಕರಾಗಿ ನೇಮಕಗೊಂಡಿದ್ದ ನಕಲಿ ಐಡಿಯನ್ನು ತೋರಿಸುತ್ತಿದ್ದನು ಎಂದು ಸಿಂಗ್​​ ಅಧಿಕಾರಿಗಳಿಗೆ ಸಾಕ್ಷಿ ನೀಡಿದ್ದಾರೆ.

"ಬಿಪಿಒದಲ್ಲಿ ತನ್ನ ಪರಿಚಯಸ್ಥರಿಗೆ ಖಾಲಿ ಹುದ್ದೆಗಳನ್ನು ನೀಡುವುದಾಗಿ ಸಿಂಗ್​​ಗೆ ಪ್ರಶಾಂತ್​​​ ಕರೆ ಮಾಡಿದರು. ಹೀಗಾಗಿ ಪ್ರಶಾಂತ್​​​ ಕುಮಾರ್ ಸರ್ಕಾರಿ ಉದ್ಯೋಗಿ ಎಂದು ತಿಳಿದು ಸಿಂಗ್ ಅವರ ಮೊಬೈಲ್​​ ನಂಬರ್​​ನ್ನು ತೆಗೆದುಕೊಂಡಿದ್ದರು. ಇದಾದ ನಂತರ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಪಿಸ್ತೂಲ್ ಲೈಸೆನ್ಸ್​​ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಪ್ರಶಾಂತ್​​ ಪಿಸ್ತೂಲ್ ಪರವಾನಗಿ ಪಡೆಯುವುದಾಗಿ ಸಿಂಗ್ ಅವರಿಂದ 71,000 ರೂ ಹಾಗೂ ರೈಲ್ವೆಯಲ್ಲಿ ತನ್ನ ಸಂಬಂಧಿಯನ್ನು ನೇಮಿಸುವ ನೆಪದಲ್ಲಿ 1 ಲಕ್ಷ ರೂ.ಗಳನ್ನು ಪಡೆದಿದ್ದನು. ನಂತರ ಸಿಂಗ್‌ಗೆ ಲೈಸೆನ್ಸ್​​ ಮತ್ತು ಕೆಲಸ ಸಿಗದಿದ್ದಾಗ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.

ಪ್ರಶಾಂತ್​​ ಕುಮಾರ್ ಸಂತ್ರಸ್ತರಿಂದ 1 ಲಕ್ಷ ರೂ ಪಡೆದು ಅವರ ಮೊಬೈಲ್​​ ನಂಬರ್​​ನ್ನು ಬ್ಲಾಕ್ ಮಾಡುತ್ತಿದ್ದರು. ಇತ್ತೀಚೆಗೆ ಅವರು ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ತಮ್ಮ ಕುಟುಂಬದ ನಾಲ್ವರು ಸದಸ್ಯರಿಗೆ ರೈಲ್ವೆಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ 4 ಲಕ್ಷ ರೂ ವಂಚಿಸಿದ್ದಾರೆ" ಎಂದು ನೋಯ್ಡಾದ ಸೆಂಟ್ರಲ್ ಡಿಸ್ಟ್ರಿಕ್ಟ್ ಶಕ್ತಿ ಮೋಹನ್ ಅವಸ್ಥಿ ಹೇಳಿದ್ದಾರೆ.

ಆರೋಪಿಯ ವಿರುದ್ಧ ನೋಯ್ಡಾ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ಶಂಕಿತನ್ನು ಸೆರೆ ಹಿಡಿಯಲು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net