ಆಂಧ್ರದಲ್ಲಿ ಬೈಕ್​ಗೆ ಗುದ್ದಿ, ಟ್ರಕ್​​ಗೆ ಡಿಕ್ಕಿ ಹೊಡೆದ ಕಾರು; ಬೆಂಗಳೂರಿನ ಮೂವರು ಸೇರಿ 4 ಮಂದಿ ದುರ್ಮರಣ

Car
Published on

ಚಿತ್ತೂರು​: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ತೀರ ಗಂಭೀರವಾಗಿದೆ.

ಕಾರಿನಲ್ಲಿದ್ದವರು ಬೆಂಗಳೂರಿನವರಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು-ನಾಯ್ಡುಪೇಟೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಈ ಕಾರು ಮೊದಲು ಮುಂದೆ ಹೋಗುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಗುದ್ದಿದೆ. ಇದರಿಂದಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್​ಗೆ ಗುದ್ದಿದ ನಂತರ ಆಯತಪ್ಪಿದ ಕಾರು, ಅಲ್ಲೇ ರಸ್ತೆ ಪಕ್ಕ ನಿಲ್ಲಿಸಿದ್ದ ಟ್ರಕ್​​ಗೆ ಡಿಕ್ಕಿಯಾಗಿದೆ. ಈ ರಭಸಕ್ಕೆ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದನ್ನೂ ಓದಿ: ಇಂಜಿನಿಯರಿಂಗ್, ವೈದ್ಯಕೀಯ ಪದವಿ ಪಾಸಾದವರಿಗೆ ಕೇಂದ್ರ ಸರ್ಕಾರದ ಬಿಎಆರ್​ಸಿಯಲ್ಲಿ ಅವಕಾಶ

ಮೃತ ಬೈಕ್​ ಸವಾರನನ್ನು ಬಾಬು (45) ಎಂದು ಗುರುತಿಸಲಾಗಿದೆ. ಇವರು ತಗ್ಗುವರಿಪಲ್ಲೆ ಗ್ರಾಮದವರು. ಕಾರಿನಲ್ಲಿದ್ದ ಬೆಂಗಳೂರು ನಿವಾಸಿಗಳಾದ ಶ್ರೀನಿವಾಸುಲು ರೆಡ್ಡಿ (55), ರತ್ನಮ್ಮ (49) ಮತ್ತು ವೆಂಕಟೇಶ್ವರ ರೆಡ್ಡಿ (29) ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ 24 ವರ್ಷದ ಶ್ರೀಶಾ ರೆಡ್ಡಿ ಎಂಬುವರು ಬದುಕುಳಿದಿದ್ದಾರೆ. ಇವರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಮುಂಜಾನೆ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net