ಎಲ್ಲರ ಗಮನಸೆಳೆದ ನಾಲ್ಕು ಕಾಲಿನ ಕೋಳಿ ಮರಿ: ಹೊಸ ವರ್ಷದ ಉಡುಗೊರೆಯಂತೆ!

Chick
Published on

ಪಲಕ್ಕಾಡ್​: ನಾಲ್ಕು ಕಾಲುಳ್ಳ ಕೋಳಿ ಮರಿ ಇದೀಗ ಕೇರಳದ ಪಲಕ್ಕಾಡ್​ನಲ್ಲಿ ಎಲ್ಲರ ಗಮನ ಸೆಳೆದಿದೆ. ವಿಶೇಷ ಕೋಳಿ ಮರಿಯು ವದವನ್ನೂರ್​ ನಿವಾಸಿ ಫಾರೂಕ್​ ಎಂಬುವರ ಮನೆಯಲ್ಲಿ ಬೆಳೆಯುತ್ತಿದೆ.

ಕೋಳಿ ಮರಿ ನಾಲ್ಕು ಕಾಲು ಹೊಂದಿದ್ದರು ಸಹ ನಡೆಯುವುದು ಮಾತ್ರ ಎರಡು ಕಾಲಿನಲ್ಲಿ. ನಾಲ್ಕು ಕಾಲಿನ ಮರಿಯು ಡಿಸೆಂಬರ್ 31ರಂದು 8 ಸಾಮಾನ್ಯ ಮರಿಗಳೊಂದಿಗೆ ಮೊಟ್ಟೆಯೊಡೆಯಿತು. ಹೊಸ ವರ್ಷದ ಹೊಸ್ತಿಲಲ್ಲಿ ಜನಿಸಿರುವ ನಾಲ್ಕು ಕಾಲಿನ ಕೋಳಿ ಮರಿಯನ್ನು ಫಾರೂಕ್​ ದಂಪತಿ ಹೊಸ ವರ್ಷ ಉಡುಗೊರೆ ಅಂದುಕೊಂಡಿದ್ದಾರೆ.

ಫಾರೂಕ್​ ಅವರು ಐದು ವರ್ಷ ಸೌದಿ ಅರೇಬಿಯಾದ ರಿಯಾದ್​ನಲ್ಲಿ ಮೆಕಾನಿಕ್​ ಆಗಿ ಕೆಲಸ ಮಾಡಿದ್ದರು. ಇದೀಗ ಪಲಕ್ಕಾಡ್​ನಲ್ಲಿ ಆಟೋ ಡ್ರೈವರ್​ ಆಗಿದ್ದಾರೆ. ಅಲ್ಲದೆ, ಕೋಳಿ ಉದ್ಯಮವನ್ನು ನಡೆಸುತ್ತಿದ್ದಾರೆ. ಸದ್ಯ ಫಾರೂಕ್​ ಅವರು ಫಾರಂನಲ್ಲಿ 90 ಕೋಳಿಗಳಿವೆ.

ಫಾರೂಕ್​ ಅವರ ಮಕ್ಕಳಾದ ಫರ್ನಿಥಾ, ಫಾತಿಮಾ ಮತ್ತು ಫಹಾದ್​ ಕೋಳಿ ಮರಿಯ ಪಾಲನೆ, ಪೋಷಣೆ ಮಾಡುತ್ತಾರೆ. ಮರಿ ಬೆಳೆದು ದೊಡ್ಡದಾದ ಮೇಲೆ ಸಾಯಿಸುವುದಿಲ್ಲ ಮತ್ತು ಯಾರಿಗೂ ಮಾರಾಟವನ್ನು ಮಾಡುವುದಿಲ್ಲ ಎನ್ನುತ್ತಾರೆ ಫಾರೂಕ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net