

ಕೊಲಂಬೊ: ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಇಂದು (ಆ.22) ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಕ್ರಮಸಿಂಘೆ ಅವರು 2023 ರ ಸೆಪ್ಟೆಂಬರ್ನಲ್ಲಿ ಬ್ರಿಟಿಷ್ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ತಮ್ಮ ಪತ್ನಿ ಪ್ರೊಫೆಸರ್ ಮೈತ್ರೀ ವಿಕ್ರಮಸಿಂಘೆ ಅವರ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು, ಇಂಗ್ಲೆಂಡ್ಗೆ ಪ್ರಯಾಣಿಸಲು ಸಾರ್ವಜನಿಕ ಹಣವನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಟಬಯ ರಾಜಪಕ್ಸೆ ಅವರ ರಾಜೀನಾಮೆಯ ನಂತರ ಜುಲೈ 2022 ರಲ್ಲಿ ವಿಕ್ರಮಸಿಂಘೆ ಅಧ್ಯಕ್ಷರಾದರು. ಸೆಪ್ಟೆಂಬರ್ 2024 ರಲ್ಲಿ ಅವರು ಮರುಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದರು.
(ಏಜೆನ್ಸೀಸ್)