ಗಾಜಿನ ಲೋಟದಲ್ಲಿ ಮೂತ್ರ ವಿಸರ್ಜಿಸಿ, ಪಾತ್ರೆಗಳ ಮೇಲೆ ಸಿಂಪಡಿಸಿದ ಸೇವಕಿ! Woman

untitled-design-2025-08-22t141849415-68a82efdefaad
Published on

Woman: ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ಕೆಲಸದಾರರನ್ನುಇಟ್ಟುಕೊಂಡಿದ್ದೀರಾ? ಹಾಗಿದ್ದರೆ, ಇಂದೇ ಅವರ ಮೇಲೆ ಒಂದು ಕಣ್ಣಿಟ್ಟಿರಿ. ಇಲ್ಲವೇ ಸಿಸಿಟಿವಿ ಅಳವಡಿಸಿ ಆಗಾಗ ಗಮನಿಸುತ್ತಿರಿ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಘಟನೆ ಏಕಂತೀರಾ ಕೇಳಿದ್ರೆ ಶಾಕ್​ ಆಗ್ತೀರ!

ಉತ್ತರ ಪ್ರದೇಶದ ಬಿಜ್ನೋರ್​ನ ಉದ್ಯಮಿಯೊಬ್ಬರ ಮನೆಯೊಂದರಲ್ಲಿ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಮನೆ ಕೆಲಸದಾಕೆ, ಕೆಲಸ ಮಾಡುವಾಗ ಗಾಜಿನ ಲೋಟದಲ್ಲಿ ಮೂತ್ರ ವಿಸರ್ಜಿಸಿ, ಅದನ್ನು ಪಾತ್ರೆ ಮೇಲೆ ಸಿಂಪಡಿಸಿರುವ ಘಟನೆ ನಡೆದಿದೆ.

ಸೇವಕಿ ಈ ರೀತಿಯಾಗಿ ಕೆಲಸ ಮಾಡುತ್ತಾಳೆಂದು ಉದ್ಯಮಿ ಕುಟುಂಬಕ್ಕೆ ಎಂದಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಮನೆಯ ಸದಸ್ಯರೊಬ್ಬರು ಆಕೆಯ ಚಟುವಟಿಕೆಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ರಹಸ್ಯವಾಗಿ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸೇವಕಿ ಸಮಂತ್ರ ಪಾತ್ರೆಗಳ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋವನ್ನು ಗಮನಿಸಿ ಆಘಾತಗೊಂಡಿದ್ದಾರೆ.

ಮಹಿಳೆ ಬಂಧನ

ಆಘಾತಕ್ಕೊಳಗಾದ ಉದ್ಯಮಿ ತಕ್ಷಣ ನಗೀನಾ ಪೊಲೀಸ್​ ಠಾಣೆಗೆ ಭೇಟಿ ನೀಡಿ, ಸೇವಕಿ ವಿರುದ್ಧ ಶಾಂತಿ ಕದಡುವ ವಿಭಾಗಗಳ ಅಡಿಯಲ್ಲಿ ಪೊಲೀಸರು ಕೇಸು ದಾಕಲಿಸಿಕೊಂಡಿದ್ದು, ಗಂಭೀರವಾಗಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net