ಸಂಪೂರ್ಣ ಕೋಮಾಕ್ಕೆ ಜಾರಿದ ಪ್ರಣಬ್​ ಮುಖರ್ಜಿ; ಪರಿಸ್ಥಿತಿ ಬಿಗಡಾಯಿಸಿದೆ ಎಂದ ವೈದ್ಯರು

Pranab Mukharjee
Published on

ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜೀ ಅವರ ಆರೋಗ್ಯ ಬಿಗಡಾಯಿಸಿದೆ. ಸಂಪೂರ್ಣ ಕೋಮಾಕ್ಕೆ ಜಾರಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ದೆಹಲಿಯ ಆರ್ಮಿ ರಿಸರ್ಚ್​ ಆ್ಯಂಡ್​ ರೆಫೆರಲ್​ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಪ್ರಣಬ್​ ಮುಖರ್ಜಿ ಅವರನ್ನು ವೆಂಟಿಲೇಟ್​ ಸಹಾಯದಲ್ಲೇ ಇಡಲಾಗಿದ್ದು, ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಂದು ಬೆಳಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಆಗಸ್ಟ್​ 10ರಂದು ಮಿದುಳು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಣಬ್ ಮುಖರ್ಜಿ ಅವರಲ್ಲಿ ಕರೊನಾ ಸೋಂಕು ಕೂಡ ದೃಢಪಟ್ಟಿದೆ. ಸರ್ಜರಿ ಆದ ದಿನದಿಂದಲೂ ಅವರ ಆರೋಗ್ಯ ಹದಗೆಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net