ಗೋಶಾಲೆಯಲ್ಲಿ ಒಂದೇ ದಿನ 10 ಹಸುಗಳು ಸಾವು; ತಪ್ಪಿತಸ್ಥರನ್ನು ಬಿಡುವುದಿಲ್ಲವೆಂದ ಜಿಲ್ಲಾಧಿಕಾರಿ

Cow Died
Published on

ಮಧ್ಯಪ್ರದೇಶದ ದೇವಾಸ್​ ಶೆಲ್ಟರ್​​​ನಲ್ಲಿ 10 ಹಸುಗಳು ಮೃತಪಟ್ಟಿವೆ. ಹಸುಗಳ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆಯಷ್ಟೇ ಬೆಳಕಿಗೆ ಬಂದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸ್ಥಳೀಯ ಆಡಳಿತಕ್ಕೆ ಹೇಳಿದ್ದೇನೆ. ಹಸುಗಳ ಸಾವು ಅಸಹಜ ಎನ್ನಿಸುತ್ತದೆ. ತಪ್ಪಿತಸ್ಥರು ಯಾರೇ ಆಗಿರಲಿ ಬಿಡುವುದಿಲ್ಲ ಎಂದು ಡಿಸಿ ಚಂದ್ರಮೌಳಿ ಶುಕ್ಲಾ ಖಡಕ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net