ಸೈಕ್ಲಿಂಗ್​ ಹೋಗಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟ ಮಾಜಿ ಶಾಸಕರ ಪುತ್ರ

Cycling
Published on

ಬಾಗಲಕೋಟೆ: ಮಾಜಿ ಶಾಸಕರೋರ್ವರ ಪುತ್ರ ಸೈಕ್ಲಿಂಗ್​ಗೆ ಹೋಗಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟ ಘಟನೆ ಕೆರೂರ ಬಳಿ ನಡೆದಿದೆ.

ಮಾಜಿ ಶಾಸಕ ದಿ.ಎಸ್​.ಎಸ್​.ಪಾಟೀಲ್​ ಅವರ ಪುತ್ರ ವಿನೋದ್​ ಪಾಟೀಲ್​ ಮೃತರು. ಇವರು ಬೀಳಗಿ ಪಟ್ಟಣದ ಅರ್ಬನ್​ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನವೂ ಸುಮಾರು 50 ಕಿಮೀ ದೂರ ಸೈಕ್ಲಿಂಗ್​ಗೆ ಹೋಗುತ್ತಿದ್ದರು. ಹಾಗೇ ಇಂದೂ ಕೂಡ ಸ್ನೇಹಿತರೊಂದಿಗೆ ಬಾಗಲಕೋಟೆಯಿಂದ ಬಾದಾಮಿ ತಾಲೂಕಿನ ಕೆರೂರ ಬಳಿ ಹೋಗಿದ್ದ ವಿನೋದ್ ಅವರಿಗೆ ಅಲ್ಲಿಯೇ ತೀವ್ರ ಹೃದಯಾಘಾತವಾಗಿದೆ. ಇದನ್ನೂ ಓದಿ: ಡ್ರಗ್ಸ್ ಜಾಲದ ತನಿಖೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗೃಹ ಸಚಿವ; ಮಹತ್ವದ ತಿರುವು…!

ವಿನೋದ್​ ಪಾರ್ಥಿವ ಶರೀರಕ್ಕೆ ಬೀಳಗಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ವಿನೋದ್​ ಅವರು ಎರಡು ದಿನಗಳ ಹಿಂದಷ್ಟೇ 70.ಕಿ.ಮೀ. ದೂರ ಸೈಕ್ಲಿಂಗ್ ಮಾಡಿದ್ದರು. ಹಾಗೇ ಮುಂದೆ 100 ಕಿ.ಮೀ. ಸೈಕ್ಲಿಂಗ್ ಮಾಡುವ ಗುರಿಯನ್ನೂ ಹೊಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net