

ಉತ್ತರಕನ್ನಡ: ಮಾಜಿ ಸಚಿವ ಪ್ರೇಮಾನಂದ ಜೈವಂತ (74) ಅವರು ಶುಕ್ರವಾರ ನಿಧನರಾದರು.
ಜನತಾ ಪಾರ್ಟಿ ಹಿರಿಯ ಮುಖಂಡರಾಗಿದ್ದ ಪ್ರೇಮಾನಂದ ಜೈವಂತರು ಶಿರಸಿ ಮೂಲದವರು. ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಪ್ರೇಮಾನಂದ ಜೈವಂತರು ಜೆ.ಎಚ್.ಪಟೇಲರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು. ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ.