ಕಾಂಗ್ರೆಸ್‌ನಿಂದ ರಾಜ್ಯದ ಲೂಟಿ

nrp bjp protest
ಬೆಲೆ ಏರಿಕೆ ವಿರುದ್ಧ ಆಟೋಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಎನ್.ಆರ್.ಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಡಿ.ಎನ್.ಜೀವರಾಜ್, ಬಿ.ಎಸ್.ಆಶೀಶ್‌ಕುಮಾರ್, ವಿ.ನೀಲೇಶ್, ಎನ್.ಎಂ.ನಾಗೇಶ್, ಎನ್.ಎಂ.ಕಾಂತರಾಜ್ ಇತರರಿದ್ದರು.
Published on

ಎನ್.ಆರ್.ಪುರ: ಚುನಾವಣೆ ಸಂದರ್ಭದಲ್ಲಿ ಜನರಿಗೆ ಭಾಗ್ಯಗಳನ್ನು ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ರಾಜ್ಯವನ್ನು ಲೂಟಿ ಹೊಡೆಯುತ್ತಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡೀಸೆಲ್, ಪೆಟ್ರೋಲ್ ದರ ಏರಿಕೆ ಖಂಡಿಸಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಭಾಗ್ಯಗಳನ್ನು ನೀಡಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುವ ಮೂಲಕ ಲೂಟಿ ಹೊಡೆಯುತ್ತಿದೆ. ಮದ್ಯದ ದರವನ್ನೂ ಸಹ ಏರಿಕೆ ಮಾಡಿದೆ. ಸ್ಟ್ಯಾಂಪ್‌ಪೇಪರ್, ಪಹಣಿ, ಮರಣ, ಜನನ ಪ್ರಮಾಣ ಪತ್ರದ ದರವನ್ನೂ ಏರಿಸಿದೆ. ಕಾಂಗ್ರೆಸ್ ಸರ್ಕಾರವನ್ನು ಜನರು ಒಂದೇ ವರ್ಷಕ್ಕೆ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದರು.
ತೈಲ ದರ ಏರಿಕೆಯಿಂದ ಎಲ್ಲ ವರ್ಗದ ಜನರಿಗೂ ಹೊರೆಯಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸಿದೆ ಎಂದು ಹಾಲಿ ಶಾಸಕರು ಆಗ ಕಾರಿಗೆ ಹಗ್ಗಕಟ್ಟಿ ಎಳೆದು ಪ್ರತಿಭಟನೆ ಮಾಡಿದ್ದರು. ಈಗ ತಮ್ಮದೇ ಸರ್ಕಾರ ಬೆಲೆ ಏರಿಸಿರುವ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ . ನಾನು ಶಾಸಕನಾದ ಅವಧಿಯಲ್ಲಿ ವಿರೋಧ ಪಕ್ಷದಲ್ಲಿದ್ದರೂ, ಆಡಳಿತ ಪಕ್ಷದಲ್ಲಿದ್ದರೂ ಾರ್ವ್ 53 ಹಕ್ಕುಪತ್ರಗಳನ್ನು ವಿತರಿಸಿದ್ದೆ. ಆದರೆ ಹಾಲಿ ಶಾಸಕರು ಹಕ್ಕುಪತ್ರ ವಿತರಿಸಲು ವಿಲರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಅರುಣಕುಮಾರ್ ಮಾತನಾಡಿ, ಒಳ್ಳೆಯ ಆಡಳಿತದ ಕನಸು ಕಂಡಿದ್ದ ರಾಜ್ಯದ ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಿದೆ. ಬಿಟ್ಟಿ ಭಾಗ್ಯಗಳನ್ನು ನೀಡುವುದಾಗಿ ಹೇಳಿ ಈಗ ಅದೇ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಕಾರ್ಯಕರ್ತರು ಆಟೋವನ್ನು ಹಗ್ಗ ಕಟ್ಟಿ ಎಳೆದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸೈಯದ್ ರ್ವೀಜ್, ನಗರ ಘಟಕದ ಅಧ್ಯಕ್ಷ ಸುರಭಿ ರಾಜೇಂದ್ರ, ತಾಲೂಕು ವಕ್ತಾರ ಎನ್.ಎಂ.ಕಾಂತರಾಜ್, ಮುಖಂಡರಾದ ಎಂ.ಎನ್.ನಾಗೇಶ್, ಬಿ.ಎಸ್.ಆಶೀಶ್‌ಕುಮಾರ್, ಕೆಸುವೆ ಮಂಜುನಾಥ್, ಎ.ಬಿ.ಮಂಜುನಾಥ್, ವಿ.ನೀಲೇಶ್, ಎಚ್.ಡಿ.ಲೋಕೇಶ್, ಶ್ರೀನಾಥ್, ಎನ್.ಡಿ.ಪ್ರಸಾದ್, ಉಪೇಂದ್ರ, ದಿವಾಕರ, ಪ್ರವೀಣ್, ಮಂಜುನಾಥ್‌ಲಾಡ್, ವೈ.ಎಸ್.ರವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net