

ನವದೆಹಲಿ: ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ ಚುನಾವಣಾ ಆಯುಕ್ತ ಅಶೋಕ್ ಲಾವಸಾ ಅವರ ಸ್ಥಾನಕ್ಕೆ ಮಾಜಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಉಪಾಧ್ಯಕ್ಷನಾಗಿ ಆಯ್ಕೆಯಾಗಿರುವ ಅಶೋಕ್ ಲಾವಸಾ ಮೊನ್ನೆಯೇ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ನೇಮಕಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ರಾಜೀವ್ ಕುಮಾರ್ ಆಗಸ್ಟ್ 31ರಿಂದ ಚುನಾವಣಾ ಆಯುಕ್ತನ ಹುದ್ದೆಗೇರಲಿದ್ದಾರೆ ಎಂದು ಕಾನೂನು ಸಚಿವಾಲಯ ತಿಳಿಸಿದ್ದಾರೆ.
ಅಶೋಕ್ ಲಾವಸಾ ಅವರು ಪಿಲಿಫ್ಪೀನ್ಸ್ ಮೂಲದ ಏಷಿಯಲ್ ಡೆವಲೆಪ್ಮೆಂಟ್ ಬ್ಯಾಂಕ್ ಸೇರಲು ಚುನಾವಣಾ ಆಯುಕ್ತನ ಸ್ಥಾನಕ್ಕೆ ಆಗಸ್ಟ್ 18ರಂದು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಸಲ್ಲಿಸಿದ್ದಾರೆ. ಅವರು ಆಗಸ್ಟ್ 31ರಂದು ರಿಲೀವ್ ಆಗಲಿದ್ದು, ಅಂದಿನಿಂದ ರಾಜೀವ್ ಕುಮಾರ್ ಅಧಿಕೃತವಾಗಿ ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. (ಏಜೆನ್ಸೀಸ್)