More

    ಪ್ರಧಾನಿ ಮೋದಿ, ಅಮಿತ್​ ಷಾಗೆ ಕ್ಲೀನ್​ ಚಿಟ್​ ಕೊಟ್ಟಿದ್ದನ್ನು ವಿರೋಧಿಸಿದ್ದ ಚುನಾವಣಾ ಆಯುಕ್ತ ಅಶೋಕ್​ ಲಾವಸಾ ರಾಜೀನಾಮೆ

    ನವದೆಹಲಿ: ಚುನಾವಣಾ ಆಯುಕ್ತ ಅಶೋಕ್​ ಲಾವಸಾ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
    ಫಿಲಿಪ್ಪೀನ್ಸ್ ಮೂಲದ ಏಷಿಯನ್​ ಡೆವಲಪ್​​ಮೆಂಟ್​​ ಬ್ಯಾಂಕ್​ (ಎಡಿಬಿ)ಗೆ ಅಶೋಕ್​ ಲಾವಸಾ ಅವರನ್ನು ಕಳೆದ ತಿಂಗಳು ಆಯ್ಕೆ ಮಾಡಲಾಗಿದೆ. ಆದರೆ ಅಲ್ಲಿ ಸೇರಬೇಕೆಂದರೆ ಅವರು ಚುನಾವಣಾ ಆಯುಕ್ತರ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು. ಈ ನಿಟ್ಟಿನಲ್ಲಿ ಇಲ್ಲಿಂದ ನಿರ್ಗಮಿಸಿದ್ದಾರೆ.

    ಅಶೋಕ್​ ಅವರು ಸೆಪ್ಟೆಂಬರ್​​ನಲ್ಲಿ ಏಷಿಯನ್​ ಡೆವಲೆಪ್​ಮೆಂಟ್​ ಬ್ಯಾಂಕ್​​ನ್ನು ಸೇರಲಿದ್ದಾರೆ. ಪ್ರಸ್ತುತ ಚುನಾವಣಾ ಮುಖ್ಯ ಆಯುಕ್ತರಾಗಿರುವ ಸುನೀಲ್​ ಅರೋರಾ 2021ರ ಏಪ್ರಿಲ್​​ನಲ್ಲಿ ನಿವೃತ್ತರಾಗಲಿದ್ದು, ಅಶೋಕ್​ ಲಾವಸಾ ರಾಜೀನಾಮೆ ನೀಡದೆ ಇದ್ದರೆ ಅವರೇ ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗುತ್ತಿದ್ದರು.

    ಅಶೋಕ್​ ಲಾವಸಾ ಅವರನ್ನು ಬ್ಯಾಂಕ್​ನ ಖಾಸಗಿ ವಲಯದ ಕಾರ್ಯಾಚರಣೆ ಮತ್ತು ಖಾಸಗಿ-ಸಾರ್ವಜನಿಕ ಸಹಭಾಗಿತ್ವಕ್ಕೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಎಡಿಬಿ ಕಳೆದ ವಾರ ತಿಳಿಸಿದೆ. ಇಷ್ಟು ದಿನ ಅದರ ಉಪಾಧ್ಯಕ್ಷರಾಗಿರುವ ದಿವಾಕರ್​ ಗುಪ್ತಾ ಅವರ ಅವಧಿ ಆಗಸ್ಟ್ 31ರಂದು ಮುಗಿಯಲಿದೆ. ಇದನ್ನೂ ಓದಿ: ಮರುಕಳಿಸಿದ ಬೈಕ್ ವ್ಹೀಲಿಂಗ್ ಹಾವಳಿ, ಹೆದ್ದಾರಿಗಳಲ್ಲಿ ಅಪಾಯಕಾರಿ ಸಾಹಸ ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳ ಬಳಕೆ

    ಅಶೋಕ್​ ಲಾವಸಾ ಅವರು 1980ರ ಬ್ಯಾಚ್​​ನ ಹರ್ಯಾಣಾ ಕೇಡರ್​​ನ ಐಎಎಸ್​ ಅಧಿಕಾರಿ. 2018ರಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಅದಕ್ಕೂ ಮೊದಲು 2016ರ ಜೂನ್​​ನಿಂದ 2017ರ ಅಕ್ಟೋಬರ್​ ರವರೆಗೆ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

    ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಎಲೆಕ್ಷನ್​ ಕಮೀಷನ್​ ಅವರಿಬ್ಬರಿಗೂ ಕ್ಲೀನ್​ ಚಿಟ್​ ಕೊಟ್ಟಿತ್ತು. ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಅವರಿಗೆ ಕ್ಲೀನ್​ ಚಿಟ್​ ಕೊಟ್ಟಿದ್ದನ್ನು ಆಯುಕ್ತ ಅಶೋಕ್​ ಲಾವಸಾ ವಿರೋಧಿಸಿದ್ದರು.(ಏಜೆನ್ಸೀಸ್​)

    ಪಾಲಕರ ಭಯಕ್ಕೆ ಆತ್ಮಹತ್ಯೆ, ಕಾರು ಅಪಘಾತವಾಗಿರುವ ವಿಷಯ ತಿಳಿಯುತ್ತದೆ ಎಂದು ನೇಣಿಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts