More

    ಎಫ್​ಕೆಸಿಸಿಐನಲ್ಲಿ ಕೌನ್ಸಿಲರ್ಸ್‌ ನೈಟ್; ಜಾಗತಿಕ ದ್ವಿಪಕ್ಷೀಯ ವಾಣಿಜ್ಯ ಚರ್ಚೆಗೆ ವೇದಿಕೆ

    ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆಸಿಸಿಐ) ಸೋಮವಾರ ವಿಶೇಷ ಕೌನ್ಸಿಲರ್ ನೈಟ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಜಾಗತಿಕ ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಬೆಳೆವಣಿಗೆಯನ್ನು ವೃದ್ಧಿಸುವ ಸಂಬಂಧ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು. ಅಂತರಾಷ್ಟ್ರೀಯ ಲಾಭದಾಯಕ ವ್ಯಾಪಾರ ಒಪ್ಪಂದಗಳು ಮತ್ತು ಪರಸ್ಪರ ಆರ್ಥಿಕ ಸಮೃದ್ಧಿಗೆ ಕಾರಣವಾಗುವ ಹಲವು ಅಂಶಗಳು ಚರ್ಚೆಗೆ ಬಂದವು.

    ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಉಪ ಕೌನ್ಸಿಲ್ ಜನರಲ್ ಹ್ಯಾರಿಯೆಟ್ ವೈಟ್, ಫ್ರಾನ್ಸ್ ಕೌನ್ಸಿಲ್ ಜನರಲ್ ಹ್ಯಾರಿಯೆಟ್ ವೈಟ್, ಇಟಲಿಯ ಕೌನ್ಸಿಲ್ ಜನರಲ್ ಆಲ್ಫೋನ್ಸೊ ತೆಗ್ಲಿಯಾಫೆರಿ ಸೇರಿದಂತೆ ವಿವಿಧ ದೇಶಗಳ ಕೌನ್ಸಿಲ್ ಜನರಲ್ಗಳು ಭಾಗಿಯಾಗಿದ್ದರು.

    ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜಾಗತಿಕ ಸಹಯೋಗ ಮತ್ತು ಆರ್ಥಿಕ ಸಹಭಾಗಿತ್ವದ ಮಹತ್ವ ಕುರಿತು ಮಾತನಾಡಿದರು. ಕೌನ್ಸಿಲರ್ ನೈಟ್ ವೇದಿಕೆಯು ಕ್ರಿಯಾತ್ಮಕ ವಾಣಿಜ್ಯ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ವೃದ್ಧಿಗಾಗಿ ನಡೆಸಲಾಗುತ್ತದೆ. ಅಂತರಾಷ್ಟ್ರೀಯ ವ್ಯಾಪಾರ ಸಂಬಂಧಗಳನ್ನು ಮತ್ತು ಆರ್ಥಿಕ ಬೆಳೆವಣಿಗೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧವನ್ನು ಸಹ ಬಲಪಡಿಸುತ್ತದೆ. ಈ ಕಾರಣದಿಂದಲೇ ಎಫ್‌ಕೆಸಿಸಿಐ ಕಳೆದ ಹಲವು ವರ್ಷಗಳಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಎ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಎಂ. ಜಿ. ಬಾಲಕೃಷ್ಣ, ಉಪಾಧ್ಯಕ್ಷೆ ಉಮಾರೆಡ್ಡಿ, ಅಂತಾರಾಷ್ಟ್ರೀಯ ಸಮಿತಿ ಸಲಹೆಗಾರ ಕೆ. ಲಕ್ಷ್ಮಣ್, ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿ ಛೇರ್ಮನ್ ಸುಶೀಮಾ ವಿದ್ಯಾರತ್ನರಾಜ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts