More

    20 ದಿನಗಳ ಬಳಿಕ ಜಿಲ್ಲೆ ಗಡಿಗೆ ಬಂದು ಮೈಸೂರಿಗೆ ತೆರಳಿದ ರೇವಣ್ಣ

    ಹಾಸನ: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ನಿರಾಳರಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು 20 ದಿನಗಳ ಬಳಿಕ ಮಂಗಳವಾರ ಸಂಜೆ ತವರು ಜಿಲ್ಲೆಗೆ ಆಗಮಿಸಿದರು. ಆದರೆ, ದಿಢೀರನೇ ಚನ್ನರಾಯಪಟ್ಟಣದಿಂದ ಮೈಸೂರಿಗೆ ಪ್ರಯಾಣ ಬೆಳೆಸಿದರು.

    ಎಚ್.ಡಿ. ರೇವಣ್ಣ ಅವರು ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ, ಬಳಿಕ ಹುಟ್ಟೂರು ಹರದನಹಳ್ಳಿಗೆ ಹೋಗಿ ಮನೆ ದೇವರಾದ ದೇವೇಶ್ವರ ಹಾಗೂ ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ದಿಢೀರನೆ ಮೈಸೂರಿನತ್ತ ಪ್ರಯಾಣ ಬೆಳೆಸಿದರು.

    ಬೆಂಗಳೂರಿನಿಂದ ಮಂಗಳವಾರ ಸಂಜೆ ಜಿಲ್ಲೆಯ ಹೆಬ್ಬಾಗಿಲು ಕಿರೀಸಾವೆ ಗಡಿಗೆ ಆಗಮಿಸಿದ ಎಚ್.ಡಿ.ರೇವಣ್ಣ ಅವರಿಗೆ ಹೋಬಳಿಯ ಜೆಡಿಎಸ್ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಕಾರಿನಿಂದ ಕೆಳಗಿಳಿದ ರೇವಣ್ಣ ಅವರು ಕಾರ್ಯಕರ್ತರ ಕಡೆ ಕೈಬಿಸಿ ಯೋಗ ಕ್ಷೇಮ ವಿಚಾರಿಸಿ ಮತ್ತೆ ಕಾರಲ್ಲಿ ಕುಳಿತು ಹಾಸನ ಕಡೆಗೆ ಹೊರಟರು. ಹಿರೀಸಾವೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು. ರೇವಣ್ಣ ಅವರ ಆಪ್ತ ಸಲಹೆಗಾರರ ಸೂಚನೆ ಮೇರೆಗೆ ಕಾರ್ಯಕರ್ತರು ಪಟಾಕಿ ಸಿಡಿಸಲಲ್ಲ. ಈ ವೇಳೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ, ಮಾಜಿ ಅಧ್ಯಕ್ಷ ಮಹೇಶ್, ಮುಖಂಡರಾದ ಎ.ಜಿ.ಪ್ರಭಾಕರ್, ಫೈನಾನ್ಸ್ ಮಹೇಶ್, ಬಾಬು ಹಾಗೂ ಇತರರು ಇದ್ದರು.

    ಈ ಮೊದಲು ಮೇ 15ರಂದೇ ಎಚ್.ಡಿ. ರೇವಣ್ಣ ಅವರು ಜಿಲ್ಲೆಗೆ ಆಗಮಿಸಬೇಕಿತ್ತು. ಆದರೆ, ಅಂದು ಕಾರಣಾಂತರಗಳಿಂದ ಅವರು ಜಿಲ್ಲೆಗೆ ಆಗಮಿಸುವ ಕಾರ್ಯಕ್ರಮ ರದ್ದಾಗಿತ್ತು. ಅ ದಾದ ಬಳಿಕ ಇದೀಗ ಜಿಲ್ಲೆಯ ಗಡಿಗೆ ಆಗಮಿಸಿದರೂ ಹೊಳೆನರಸೀಪುರಕ್ಕೆ ಬಾರದೆ ಮೈಸೂರಿಗೆ ತೆರಳಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts