ಇರುಳಿಗರ ಧರಣಿಗೆ 250 ದಿನ: ಹಂದಿಗೊಂದಿ ಅರಣ್ಯಕ್ಕೆ ಉಪವಿಭಾಗಾಧಿಕಾರಿಗಳ ಭೇಟಿ, ಸ್ಥಳ ಪರಿಶೀಲನೆ

Kailancha-Ph-0001-Eruliga Prathibatane Place Visit AC RMGM-30-10-2021
Published on

ಕೈಲಾಂಚ :  ಭೂಮಿ ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗ ಬುಡಕಟ್ಟು ಸಮುದಾಯ ನಡೆಸುತ್ತಿರುವ ಧರಣಿ ಶನಿವಾರಕ್ಕೆ 250 ದಿನ ಪೂರೈಸಿದೆ.

ಒಕ್ಕಲೆಬ್ಬಿಸಿದ ಜಾಗದಲ್ಲೇ ಭೂಮಿ ನೀಡಬೇಕು ಎಂದು ಒತ್ತಾಯಿಸಿ ಸಮುದಾಯದ 24 ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ಟೆಂಟ್ ಹಾಕಿ ಅಹೋರಾತ್ರಿ ಧರಣಿ ನಡೆಸುತ್ತಿವೆ.

ಧರಣಿ ನಿರತರ ಮನವಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಸಲುವಾಗಿ ರಾಮನಗರ ಎಸಿ ಮಂಜುನಾಥ್ ಹಾಗೂ ತಹಸೀಲ್ದಾರ್ ವಿಜಯಕುಮಾರ್ ಶನಿವಾರ ಸ್ಥಳ ಪರಿಶೀಲಿಸಿದರು. ಸಮುದಾಯದ ಮುಖಂಡ ಕೃಷ್ಣಮೂರ್ತಿ ವಾತನಾಡಿ, 2006ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಸುವಾರು 8 ವರ್ಷಗಳಿಂದ ಅರಣ್ಯ ಭೂಮಿ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಅರಣ್ಯ ಹಕ್ಕುಕಾಯ್ದೆಯನ್ನು ಒಪ್ಪದೆ ಹಿಂದೆ ಅರಣ್ಯದಲ್ಲಿ ವಾಸಿಸುತ್ತಿದ್ದ ಜಾಗದಲ್ಲಿ ಜಮೀನಿನ ಬದು, ಒರಳುಕಲ್ಲು, ಪೂಜಾ ಸ್ಥಳ 1993-94ರಲ್ಲಿ ರಾಮನಗರ ತಹಸೀಲ್ದಾರ್ ಕಚೇರಿ ಹಿಂಬರಹ ಹಾಗೂ ಸ್ಮಶಾನ ಮುಂತಾದ ಸಾಕ್ಷಿಗಳಿದ್ದರೂ ವಲಯ ಅರಣ್ಯಾಧಿಕಾರಿಗಳು ಇದಕ್ಕೆ ಒಪ್ಪದೆ ಕಾನೂನುಬಾಹಿರ ಎಂದು ಹಿಂಬರಹ ನೀಡಿದ್ದಾರೆ ಎಂದರು.

ಈ ಸಂಬಂಧ ರಾಮನಗರ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಮನವಿ ಸಲ್ಲಿಸಲಾಗಿ, ಹಲವಾರು ಸಭೆ, ಸ್ಥಳ ಪರಿಶೀಲನೆ ನಂತರ ಅರಣ್ಯ ಭೂಮಿ ಮಂಜೂರು ವಾಡಲು ತೀರ್ವಾನಕ್ಕೆ ಬರಲಾಯಿತು. ಆದರೂ, ಅರಣ್ಯ ಇಲಾಖೆ ಎಸಿಎಫ್ ಅವರು ಸಹಿ ಮಾಡದ ಕಾರಣ ಮತ್ತೆ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಅರಣ್ಯ ಹಕ್ಕು ಸಮಿತಿಗೆ ಮನವಿ ವಾಡಲಾಗಿತ್ತು ಎಂದರು.

ಉಪ ವಿಭಾಗಾಧಿಕಾರಿಗಳ ಜತೆಯಲ್ಲಿ ತಹಸೀಲ್ದಾರ್ ವಿಜಯಕುವಾರ್, ಇಒ ಶಿವಕುವಾರ್, ಉಪತಹಸೀಲ್ದಾರ್ ರುದ್ರಮ್ಮ, ರಾಜಸ್ವ ನಿರೀಕ್ಷಕ ಪುಟ್ಟರಾಜು, ಗ್ರಾಮಲೆಕ್ಕಿಗ ಮಂಜುನಾಥ್, ಪಿಡಿಒ ಸತೀಶ್, ಎಎಸ್‌ಐ ಬೆಟ್ಟಸ್ವಾಮಯ್ಯ ಗ್ರಾಮಸ್ಥರಾದ ಮಹದೇವಯ್ಯ, ಲಕ್ಷ್ಮಮ್ಮ, ದೇವಯ್ಯ, ನವಣಯ್ಯ, ಈರಮ್ಮ, ವಾದಮ್ಮ, ಮಹದೇವಮ್ಮ, ಜೆ.ಎನ್.ಶಿವರಾಜು, ಶಿವವಾದಮ್ಮ, ಮುಂತಾದವರಿದ್ದರು.

ಅಧಿಕಾರಿಗಳ ವಿರುದ್ಧ ದಾವೆ :  ನಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಮಿತಿ ಸಭೆಯಲ್ಲಿ ಚರ್ಚಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಹೂಡಲು ತೀರ್ವಾನಿಸಿದ್ದೇವೆ. ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಭೂಮಿ ನೀಡದಿದ್ದರೆ ನಮ್ಮ ಜಾಗಗಳಲ್ಲಿ ಮುಳ್ಳು ಗಿಡ-ಗಂಟಿಗಳನ್ನು ಕಿತ್ತು ಭೂಮಿ ಹಸನು ಮಾಡಿಕೊಳ್ಳುತ್ತೇವೆ ಎಂದು ಕೃಷ್ಣಮೂರ್ತಿ ತಿಳಿಸಿದರು.

ಸಾಕ್ಷ್ಯ ತೋರಿಸಿದರೂ ಸಹಿ ಮಾಡದ ಎಸಿ :  ತಹಸೀಲ್ದಾರ್ ವಿಜಯಕುವಾರ್, ಸವಾಜ ಕಲ್ಯಾಣ ಅಧಿಕಾರಿ, ತಾಪಂ ಇಒ, ಗ್ರಾಪಂ ಪಿಡಿಒ, ಪೊಲೀಸರು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರ ಜತೆ ಉಪವಿಭಾಗಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದಾಗ, ಅರಣ್ಯದಲ್ಲಿ ನಾವು ಕೃಷಿ ಮಾಡುತ್ತಿದ್ದುದಕ್ಕೆ ಸಾಕ್ಷ್ಯಗಳನ್ನು ತೋರಿಸಿದೆವು. ಆದರೆ, ಅರಣ್ಯ ಹಕ್ಕು ಸಮಿತಿ ಸಭಾ ನಡಾವಳಿಗಳಿಗೆ ಸಹಿ ವಾಡದೆ ಜಿಲ್ಲಾಧಿಕಾರಿಗಳಿಗೆ ವಾಹಿತಿ ನೀಡಲಾಗುವುದು ಎಂದು ಹೇಳಿ ತೆರಳಿದರು ಎಂದು ಕೃಷ್ಣಮೂರ್ತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net