ಹಂಪಿಯಲ್ಲಿ ಕಾಣಿಸಿಕೊಂಡ ವಿದೇಶಿಗರು; ಸ್ಥಳೀಯರಲ್ಲಿ ಆತಂಕ

Foriegnrs 17 March 20
Published on

ಹೊಸಪೇಟೆ(ಬಳ್ಳಾರಿ): ಕರೋನ ಭೀತಿಯಿಂದಾಗಿ ಹಂಪಿಯ ಸಂರಕ್ಷಿತ ಸ್ಮಾರಕಗಳ ವೀಕ್ಷಣೆಗೆ ವಿದೇಶಿಗಳ  ಆಗಮನಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದರೂ, ಮಂಗಳವಾರ ಹಂಪಿ ಬಸ್ ನಿಲ್ದಾಣದಲ್ಲಿ ಇಬ್ಬರು ವಿದೇಶಿಗರು ಪ್ರತ್ಯಕ್ಷವಾಗಿದ್ದ ಸಾರ್ವಜನಿಕರು ಆತಂಕಕ್ಕೊಳಗಾದರು.

ಹಂಪಿಗೆ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕರೋನ ವೈರಸ್ ಏ.16ರಿಂದಲೇ ವಿದೇಶಿಗರು ಹಂಪಿ ಪ್ರವೇಶ ಮಾಡದಂತೆ ಆದೇಶ ಹೊರಡಿಸಲಾಗಿದೆ. ಆದಾಗ್ಯೂ ಇಬ್ಬರು ಕಂಡು ಬಂದಿದ್ದು, ಅಚ್ಚರಿ ಮತ್ತು ಆತಂಕ ಮೂಡಿಸಿದೆ. ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿದ್ದ ವೈದ್ಯರ ವಿಶೇಷ ತಪಾಸಣಾ ತಂಡವನ್ನು ಆರೋಗ್ಯ ಇಲಾಖೆ ಹಿಂದೆ ಕರೆಸಿದೆ. ಹೀಗಾಗಿ ಈ ಇಬ್ಬರು ವಿದೇಶಿಗರ ಆರೋಗ್ಯ ತಪಾಸಣೆ ಮಾಡಿದ್ದಾರೋ ಇಲ್ಲವೋ ಎಂಬ ಆತಂಕ ಜನರನ್ನು ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net