More

    Covid19 ಹುಟ್ಟೂರು ಅಮೆರಿಕ ಎಂದ ಚೀನಾ ವಕ್ತಾರ!

    ವಾಷಿಂಗ್ಟನ್/ಬೀಜಿಂಗ್​: ಕರೊನಾ ವೈರಸ್ Covid19 ಸೋಂಕು ಜಗತ್ತಿನಾದ್ಯಂತ ಪಸರಿಸಿದ್ದು, ಅಮೆರಿಕದ ರಾಜಕಾರಣಿಗಳು ಈ ವೈರಸನ್ನು ಚೀನೀಸ್ ವೈರಸ್​, ವುಹಾನ್ ವೈರಸ್ ಎಂದು ಸಂಬೋಧಿಸುತ್ತಿರುವುದು ಈಗ ಚೀನೀಯರ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ಮಾಧ್ಯಮಗಳು ಇದನ್ನು ಪೊಲಿಟಿಕಲ್ ವೈರಸ್ ಎಂದು ಸಂಬೋಧಿಸಿದ್ದು, ಇದರೊಂದಿಗೆ ಬ್ಲೇಮ್​ಗೇಮ್ ಶುರುವಾಗಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ರಾತ್ರಿ ಮಾಡಿದ್ದ ಟ್ವೀಟ್​ ಜಗತ್ತಿನ ಗಮನಸೆಳೆದಿದ್ದು, ಅದರಲ್ಲಿ ಚೀನೀಸ್ ವೈರಸ್ ಎಂಬ ಪದ ಬಳಸಿದ್ದರು. ಇದೇ ವೇಳೆ ಟ್ರಂಪ್ ಸಹೋದ್ಯೋಗಿಗಳು ಇದನ್ನು ಚೀನೀಸ್ ಕರೊನಾ ವೈರಸ್ ಎಂದು ಈಗಾಗಲೇ ಹೇಳುತ್ತಿದ್ದುದು ಗಮನಾರ್ಹವಾಗಿತ್ತು. ಆದರೆ, ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಇದೇ ಮೊದಲ ಸಲ ಹೀಗೆ ನೇರವಾಗಿ ಚೀನೀಸ್ ವೈರಸ್ ಎಂಬ ಪದ ಬಳಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
    ಚೀನಾದ ಅಧಿಕಾರಿ ಯಾಂಗ್ ಜೈಚಿ ಜತೆಗೆ ಫೋನ್​ ಕರೆಯಲ್ಲಿ ಮಾತನಾಡಿದ ವೇಳೆ, ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್​ ಮೈಕ್ ಪೋಂಪಿಯೋ ಅವರು Covid19 ವೈರಸ್​ಗೆ ಸಂಬಂಧಿಸಿ ಅಮೆರಿಕದ ವಿರುದ್ಧ ಪಿತೂರಿ ನಡೆಸಲು ಚೀನಾ ತನ್ನ ಅಧಿಕೃತ ಚಾನೆಲ್​ಗಳನ್ನು ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಲ್ಲಿಂದೀಚೆಗೆ ಈ ಬ್ಲೇಮ್​ ಗೇಮ್ ಶುರುವಾಗಿದೆ.
    ಇದಕ್ಕೂ ಮುನ್ನ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್​ ಮಾಂಡ್ರೈನ್ ಮತ್ತು ಇಂಗ್ಲಿಷ್​ನಲ್ಲಿ ಟ್ವೀಟ್ ಮಾಡಿದ್ದು, ಅದರಲ್ಲಿ ಈ ಸೋಂಕು ವುಹಾನ್​ನಲ್ಲಿ ಹುಟ್ಟಿರುವುದಲ್ಲ, ಅಮೆರಿಕದಿಂದ ಬಂದ ಸೋಂಕಿದು ಎಂದು ಬರೆದುಕೊಂಡಿದ್ದರು. ಇದರ ಬೆನ್ನಿಗೇ ಶುಕ್ರವಾರ ಅಮೆರಿಕದ ಸ್ಟೇಟ್ ಡಿಪಾರ್ಟ್​ಮೆಂಟ್​ ಚೀನೀ ರಾಯಭಾರಿ ಕುಯಿ ಟಿನಾಕೈ ಅವರನ್ನು ಕಚೇರಿಗೆ ಕರೆಯಿಸಿಕೊಂಡು ಎಚ್ಚರಿಕೆ ನೀಡಿದ್ದರು.

    ಬ್ರೇಕಿಂಗ್ ನ್ಯೂಸ್- ಕರೊನಾ ವೈರಸ್​ Covid19ಗೆ ದೇಶದಲ್ಲಿ ಮೂರನೇ ಬಲಿ: ಸೋಂಕಿಗೆ ಕೊನೆಯುಸಿರೆಳೆದ ಮುಂಬೈನ 64 ವರ್ಷದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts